ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿಯಲ್ಲಿ ಹುತಾತ್ಮರ ದಿನಾಚರಣೆ

ಶಾಲೆ, ಕಾಲೇಜು, ಸಂಘಟನೆಗಳಿಂದ ಗಾಂಧೀಜಿ ಸ್ಮರಣೆ
Published 31 ಜನವರಿ 2024, 5:15 IST
Last Updated 31 ಜನವರಿ 2024, 5:15 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ವಿವಿಧ ಕಡೆಗಳಲ್ಲಿ ಮಂಗಳವಾರ ಮಹಾತ್ಮ ಗಾಂಧಿ ಅವರ ಪುಣ್ಯಸ್ಮರಣೆ ದಿನವನ್ನು ವಿವಿಧ ಸಂಘಟನೆಗಳು ಹುತಾತ್ಮ ದಿನವನ್ನಾಗಿ ಆಚರಿಸಲಾಯಿತು.

ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿಎಂ, ಪ್ರಾಂತ ರೈತ ಸಂಘ, ಹಸಿರು ಸೇನೆ ರೈತ ಸಂಘ, ವೆಲ್ಫೇರ್‌ ಪಕ್ಷ, ಕೃಷಿ ಕೂಲಿಕಾರರ ಸಂಘದ ಪ್ರತಿನಿಧಿಗಳು ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಕೋಮು ಸೌಹಾರ್ದತೆ ಕುರಿತು ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ದೇಶದಲ್ಲಿ ಕೋಮು ಸೌಹಾರ್ದಕ್ಕೆ ಬಹಳಷ್ಟು ರೀತಿಯಲ್ಲಿ ಧಕ್ಕೆಯಾಗುತ್ತಿದೆ. ಜನರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವ ನಿಟ್ಟಿನಲ್ಲಿ ಜನ ಅಪೇಕ್ಷೆ ಹೊಂದಿದ್ದು ಅದಕ್ಕೆ ಪೂರಕವಾಗಿ ಅವುಗಳನ್ನು ಈಡೇರಿಸಲು ಸಂಘಟನೆಗಳು, ಸರ್ಕಾರಗಳು ಮುಂದಾಗಬೇಕಿದೆ ಎಂದರು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಜನರಲ್ಲಿ ಕೋಮುವಾದಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ನಂತರ ಸೌಹಾರ್ದ ಭಾರತ ನಿರ್ಮಾಣಕ್ಕೆ ಸಂಕಲ್ಪಕ್ಕೆ ಪ್ರತಿಜ್ಞೆ ಸ್ವೀಕರಿಸಲಾಯಿತು. ಪ್ರಮುಖರಾದ ಆರ್‌.ಕೆ.ದೇಸಾಯಿ, ಹಸನುದ್ದೀನ್‌ ಅಲಂಬರ್ದಾರ್, ಶಂಕರಗೌಡ, ಮೆಹಬೂಬಸಾಬ್ ಹುರಕಡ್ಲಿ, ಮಹ್ಮದ್‌ ಆಫ್ತಾಬ್‌, ಪುರಸಭೆ ಸದಸ್ಯ ವಸಂತ ಮೇಲಿನಮನಿ, ನಜೀರಸಾಬ್ ಮೂಲಿಮನಿ, ಅಡಿವೆಪ್ಪ ನೆರೆಬೆಂಚಿ, ಕಲಾವತಿ ಮೆಣೆದಾಳ ಇತರರು ಇದ್ದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಪ್ರಾಚಾರ್ಯ ಎಸ್.ವಿ.ಡಾಣಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ಯಲಬುರ್ಗಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವೀರೇಶ ಗಜೇಂದ್ರಗಡ ಇತರರು ಮಾತನಾಡಿದರು. ಅಧ್ಯಾಪಕರಾದ ಅಶೋಕ ಕೆಂಚರಡ್ಡಿ, ಭೋಜರಾಜ, ವಿದ್ಯಾವತಿ ಗೋಟೂರು, ರವಿ, ಐ.ಎಸ್.ದ್ಯಾಮವ್ವನಗುಡಿ, ಮಂಜುನಾಥ ಹನುಮಸಾಗರ ಇತರರು ಇದ್ದರು. ಮಹಾಂತೇಶ ಗವಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT