ಕೊಪ್ಪಳ: ಇಲ್ಲಿನ ಸರ್ದಾರ್ ಗಲ್ಲಿಯಲ್ಲಿ ಭಾನುವಾರ ಮುಸ್ಲಿಂ ಪಿಂಜಾರ್ ಪಂಚ ಕಮಿಟಿ ವತಿಯಿಂದ ಸತತ 21ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. 20 ನವಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟರು.

ಸಾಮೂಹಿಕ ವಿವಾಹಗಳ ಮಾದರಿಯಿಂದ ಬಡವರಿಗೆ ಅನುಕೂಲವಾಗುತ್ತದೆ. ಅನಗತ್ಯವಾಗಿ ಆರ್ಥಿಕ ಹೊರೆ ತಪ್ಪಿಸಲು ಸಾಧ್ಯವಾಗುತ್ತದೆ. ಒಂದು ಮದುವೆಯಾದರೆ ನಿರ್ದಿಷ್ಟ ಜನರ ಆಶೀರ್ವಾದ ಮಾತ್ರವಿರುತ್ತದೆ. ಸಾಮೂಹಿಕವಾಗಿ ಆದರೆ ಎಲ್ಲ ಹಿರಿಯರ, ಬಂಧುಗಳ, ಸ್ನೇಹಿತರ ಆಶೀರ್ವಾದ ಒಟ್ಟಿಗೆ ಪಡೆದುಕೊಳ್ಳುವ ಸೌಭಾಗ್ಯ ಲಭಿಸುತ್ತದೆ ಎಂದು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿವಿಧ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಯಮಿ ಕೆ.ಎಂ. ಸೈಯದ್ ನವಜೋಡಿಗೆ ಮಾಂಗಲ್ಯದ ಚಿನ್ನದ ಸರಗಳನ್ನು ಉಡುಗೊರೆಯಾಗಿ ನೀಡಿದರು.

ಮುಸ್ಲಿಂ ಧರ್ಮಗುರು ಧರ್ಮಗುರು ಯುಸೂಫಿಯಾ ಮಸೀದಿಯ ಹಜರತ್ ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್, ಶಾಸಕ ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕಮಿಟಿಯ ಕಾರ್ಯದರ್ಶಿ ಮೆಹಬೂಬ್ ಪಾಷಾ ಮಾನ್ವಿ, ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯ ಕೋಶಾಧಿಕಾರಿ ಶಹಾಬುದ್ದೀನ್ಸಾಬ್, ನಬಿಸಾಬ್ ಸಂಕನೂರ, ಮೀರಾಸಾಬ್ ಬನ್ನಿಗೋಳ, ಉದ್ಯಮಿ ಕೆ.ಎಂ. ಸೈಯದ್, ಪಂಚ ಕಮಿಟಿ ಅಧ್ಯಕ್ಷ ಖಾದರಸಾಬ್ ಕುದ್ರಿಮೋತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.