ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಬುರ್ಗಾ: ಮೊಗ್ಗಿಬಸವೇಶ್ವರ ಜಾತ್ರೆ ಸಮಾರೋಪ

Published 16 ಮೇ 2024, 6:14 IST
Last Updated 16 ಮೇ 2024, 6:14 IST
ಅಕ್ಷರ ಗಾತ್ರ

ಯಲಬುರ್ಗಾ: ಕಳೆದ ಐದು ದಿನಗಳ ಕಾಲ ನಡೆದ ಸ್ಥಳೀಯ ಮೊಗ್ಗಿಬಸವೇಶ್ವರ ಜಾತ್ರೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.

ಬಸವ ಜಯಂತಿ ದಿನದಿಂದ ಆರಂಭಗೊಂಡ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ, ಉಪನ್ಯಾಸಕ, ಸಾಧಕರಿಗೆ ಸನ್ಮಾನ, ಜೋಡೆತ್ತುಗಳ ಮೆರವಣಿಗೆ, ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಮೆರವಣಿಗೆ, ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆ ಸ್ಥಳೀಯ ಕಲಾವಿದರಿಂದ ಸಾಮಾಜಿಕ ನಾಟಕ ಪ್ರದರ್ಶನ ಜರುಗಿದವು.

ಮುಕ್ತಾಯ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಹಲವು ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಬಸವ ಜಯಂತಿ ದಿನದಂದು ಆಚರಿಸಲ್ಪಡುವ ಮೊಗ್ಗಿಬಸವೇಶ್ವರ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಮೆರಗು ಕಂಡು ಬರುತ್ತಿದೆ. ರೈತರು ತಮ್ಮ ರಾಸುಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ’ ಎಂದರು.

ಗುಳೆದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳಾದ ಅಮರಪ್ಪ ಕಲಬುರ್ಗಿ, ಮಲ್ಲೇಶಗೌಡ್ರ ಮಾಲಿಪಾಟೀಲ, ಸುರೇಶಗೌಡ ಶಿವನಗೌಡ್ರ, ಷಣ್ಮುಖಪ್ಪ ರಾಂಪೂರ, ದಾನನಗೌಡ ತೊಂಡಿಹಾಳ, ಬಸವರಾಜ ಅಧಿಕಾರಿ, ಬಸಲಿಂಗಪ್ಪ ಕೊತ್ತಲ, ಎಸ್.ಎನ್. ಶ್ಯಾಗೊಟಿ, ಪಟ್ಟಣ ಪಂಚಾಯಿತಿ ಸದಸ್ಯ ಕಳಕಪ್ಪ ತಳವಾರ ಸೇರಿ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT