ಭಾನುವಾರ, ಜೂನ್ 26, 2022
21 °C

ಕಷ್ಟಕ್ಕೆ ಪುರಸಭೆ ಸದಸ್ಯೆ ಸ್ಪಂದನೆ: ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ‘ಕೊರೊನಾ ಅನೇಕ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ. ಕ್ಷೇತ್ರದ ಕಾರ್ಯಕರ್ತರು ಜನರಿಗೆ ನೆರವಿನ ಹಸ್ತ ಚಾಚಬೇಕು. ಅವರಿಗೆ ಸ್ಥೈರ್ಯ ನೀಡಬೇಕು’ ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ಪುರಸಭೆ ಸದಸ್ಯೆ ಸ್ವಾತಿ ಅಮರೇಶ ಪಾಟೀಲ ಅವರ ಆಹಾರ ಧಾನ್ಯದ ಕಿಟ್‌ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಕ್ಷದ ಕಾರ್ಯಕರ್ತರು ಜನಪ್ರತಿನಿಧಿಗಳಂತೆ ಜನರಿಗೆ ನೆರವು ನೀಡಲು ಮುಂದೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದು ಇತರರಿಗೆ ಮಾದರಿಯಾಗಬೇಕು. ಆರ್ಥಿಕವಾಗಿ ಸದೃಢರಾಗಿರುವ ಕಾರ್ಯಕರ್ತರು ಕೈಲಾದ ಸಹಾಯ ಮಾಡಲು ಮುಂದಾಗಬೇಕು ಎಂದರು.

ಪುರಸಭೆ ಸದಸ್ಯೆ ಸ್ವಾತಿ ಅಮರೇಶ ಪೊಲೀಸ್‌ ಪಾಟೀಲ ಮಾತನಾಡಿ,‘ಸಂಕಷ್ಟದಲ್ಲಿರುವವರಿಗೆ ಕೈಲಾದ ನೆರವು ನೀಡಿದ್ದೇವೆ’ ಎಂದರು.

ಪುರಸಭೆ ಅಧ್ಯಕ್ಷ ಶರಣೇಶ ಸಾಲೋಣಿ, ಎಪಿಎಂಸಿ ಸದಸ್ಯ ಅರಳಿ ನಾಗರಾಜ್‌, ಪ್ರಮುಖರಾದ ಬಿಲ್ಗಾರ ನಾಗರಾಜ್‌ ವಕೀಲ, ಚನ್ನಬಸಪ್ಪ ಸುಂಕದ, ಅಮರೇಶ ಪಾಟೀಲ, ಶಿವಶರಣೇಗೌಡ, ರಮೇಶ ಮಾವಿನಮಡುಗು, ಪ್ರಭುರಾಜ್‌ ಬೂದಿ, ಉಮೇಶ ಸಜ್ಜನ್‌, ಅಮರೇಶ ಕುಳಗಿ, ಮಂಜುನಾಥ ಮಸ್ಕಿ, ಗ್ರಾಮೀಣ ಇನ್‌ಸ್ಪೆಕ್ಟರ್ ಉದಯರವಿ, ಸಬ್‌ ಇನ್‌ಸ್ಪೆಕ್ಟರ್ ಲಕ್ಕಪ್ಪ ಬಿ. ಅಗ್ನಿ, ತಹಶೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು