ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ರಾಮ ಮಂದಿರದಲ್ಲಿ ಮುಸ್ಲಿಮರಿಂದ ಪೂಜೆ

Published 22 ಜನವರಿ 2024, 6:14 IST
Last Updated 22 ಜನವರಿ 2024, 6:14 IST
ಅಕ್ಷರ ಗಾತ್ರ

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆಯಲ್ಲಿ‌ ಇಲ್ಲಿನ ಭಾಗ್ಯನಗರದ ಮುಸ್ಲಿಂ‌ ಸಮುದಾಯದವರು ಭಾವೈಕ್ಯ ‌ಮೆರೆದಿದ್ದಾರೆ.

ರಾಮಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಮುಸ್ಲಿಂ ಸಮುದಾಯದ ಪಂಚ‌ ಕಮಿಟಿ ಸದಸ್ಯರು ಸೋಮವಾರ ಪೂಜೆ ಸಲ್ಲಿಸಿದರು.

ಪಂಚಕಮಿಟಿ ಸದಸ್ಯರು ಒಂದೂವರೆ ಸಾವಿರ ಹಿಂದೂ ಭಕ್ತಾದಿಗಳಿಗೆ ಅನ್ನ, ಸಾರು, ಬದನೇಕಾಯಿ ಪಲ್ಲೆ, ಗೋಧಿ ಹುಗ್ಗಿ ವ್ಯವಸ್ಥೆ ಮಾಡಿದ್ದಾರೆ. ದೇವಸ್ಥಾನಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಭಕ್ತರು ಜೊತೆಯಾಗಿ ಪೂಜೆ ಸಲ್ಲಿಸಿದರು. ಮುಸ್ಲಿಮರು ಹಿಂದೂ ಜನರಿಗೆ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT