ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ₹3 ಕೋಟಿ ವೆಚ್ಚದಲ್ಲಿ ಹೊಸ ಕಾಲೇಜು ಕಟ್ಟಡ: ಶಾಸಕ ದೊಡ್ಡನಗೌಡ ಪಾಟೀಲ

Published 27 ಜೂನ್ 2024, 16:25 IST
Last Updated 27 ಜೂನ್ 2024, 16:25 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದಲ್ಲಿ ₹ 3 ಕೋಟಿ ವೆಚ್ಚದಲ್ಲಿ ಸರ್ಕಾರಿ ಜೂನಿಯರ್‌ ಕಾಲೇಜಿನ ಹೊಸ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ವಿಧಾನಸಭೆಯಲ್ಲಿನ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ಗುರುವಾರ ಕಾಲೇಜಿನ ಹಳೆಯ ಕಟ್ಟಡಕ್ಕೆ ಭೇಟಿ ನೀಡಿ ನಂತರ ಮಾಹಿತಿ ನೀಡಿದ ಅವರು 70ರ ದಶಕದಲ್ಲಿ ನಿರ್ಮಾಣಗೊಂಡು ಈಗ ಶಿಥಿಲಾವಸ್ಥೆ ತಲುಪಿರುವ ಕಟ್ಟಡ ವೀಕ್ಷಿಸಿ ಮತ್ತು ಹೊಸ ಕಟ್ಟಡ ನಿರ್ಮಾಣ ಸ್ಥಳ ಪರಿಶೀಲಿಸಿದರು. ನಂತರ ಮಾಹಿತಿ ನೀಡಿದ ಅವರು, ಹಳೆಯ ಕಟ್ಟಡ ತೆರವಿಗೆ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲಿ ಅನುಮತಿ ದೊರಕಿಸಿಕೊಡಲಾಗುತ್ತದೆ. ಹೊಸ ಕಟ್ಟಡದ ವಿನ್ಯಾಸಕ್ಕೆ ಬಂದಿರುವ ಸಲಹೆಗಳನ್ನು ಪರಿಶೀಲಿಸಲಾಗುತ್ತಿದ್ದು ವಿಶಾಲ ಆಟದ ಮೈದಾನ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈಗಾಗಲೇ ಅನುದಾನವೂ ಬಿಡುಗಡೆಯಾಗಿದೆ ಎಂದರು.

ಕೆಆರ್‌ಡಿಎಲ್‌ ಎಂಜಿನಿಯರ್‌ ಇರ್ಫಾನ್‌, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸಹ ಶಿಕ್ಷಕ ಮಹಾಂತೇಶ ಜಾಲಿಗಿಡದ, ಶಶಿಧರ ಕವಲಿ, ಶಂಕರಪ್ಪ ಕಂಪಾಪುರಮಠ, ಈರಣ್ಣ ಸೊಬರದ, ಪಾಂಡುರಂಗ ಆಶ್ರೀತ್, ಸಿದ್ಧಲಿಂಗಪ್ಪ ಕಲಕಬಂಡಿ, ಪ್ರಕಾಶ ಬೆದವಟ್ಟಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT