ಕೊಪ್ಪಳ: ‘ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವಾ ಮನೋಭಾವನೆ ಮತ್ತು ಐಕ್ಯತೆ ಬೆಳೆಸುವುದಕ್ಕಾಗಿಯೇ ಎನ್‌ಎಸ್‌ಎಸ್ ಸ್ಥಾಪನೆಯಾಗಿದೆ‘ ಎಂದು ಡಾ. ಸೋಮಪ್ಪ ಬಡಿಗೇರ ಹೇಳಿದರು.

ತಾಲ್ಲೂಕಿನಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಎನ್‌ಎಸ್ ಶಿಬಿರದಲ್ಲಿ ಮಾತನಾಡಿದರು.

ಪ್ರೊ. ಸುರೇಶಕುಮಾರ ಸೊನ್ನದ ಮಾತನಾಡಿ ‘ವಿದ್ಯಾರ್ಥಿಗಳು ಸ್ವಾವಲಂಬಿ ಬದುಕು ಸಾಗಿಸಲು ಗುಡಿಕೈಗಾರಿಕೆ, ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆ, ಸಂವಹನ ಕೌಶಲ ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು’ ಎಂದರು.

ಗ್ರಾಮದ ಹಿರಿಯರಾದ ವಿ.ಬಿ. ಪಟ್ಟಣಶೆಟ್ಟಿ ‘ಯುವಕರು ಎನ್.ಎಸ್.ಎಸ್ ಘಟಕದ ಉದ್ದೇಶಗಳಿೆ ಅನುಸಾರವಾಗಿ ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯಬೇಕು’ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ವಿಠೋಬ ಎಸ್., ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ವೀರಬಸಪ್ಪ ಶೆಟ್ಟರ್, ಹನುಮೇಶ ಕುಷ್ಟಗಿ, ಯಮನೂರಪ್ಪ ಗದ್ದಿಗೇರಿ, ಪ್ರಾಧ್ಯಾಪಕರಾದ ಪ್ರಕಾಶಗೌಡ ಎಸ್.ಯು, ಅನಿತಾ, ದಿವ್ಯಾ, ಅನಿತಾ ಪಾಟೀಲ್, ಮಂಜುನಾಥ, ಎಚ್.ಕೆ. ನರೇಗಲ್, ಜಗದೀಶ್, ಸಹ ಶಿಬಿರಾಧಿಕಾರಿಗಳಾದ ಮಹೇಶಕುಮಾರ, ವೆಂಕಟೇಶ, ಮಹೆಬೂಬಪಾಷಾ ಮಕಾನದಾರ್ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾಧಿಕಾರಿ ಪ್ರೊ. ಉಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.