ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಕ್ಮಿಣಿ ಸಹಿತ ಪಾಂಡುರಂಗ ದೇವರ ಜಾತ್ರಾ

Last Updated 29 ಮಾರ್ಚ್ 2021, 1:58 IST
ಅಕ್ಷರ ಗಾತ್ರ

ಹನುಮಸಾಗರ: ಇಲ್ಲಿನ ರುಕ್ಮಿಣಿ ಸಹಿತ ಪಾಂಡುರಂಗ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಕೇತಿಕವಾಗಿ ರಥೋತ್ಸವ ಜರುಗಿತು.

ಬೆಳಿಗ್ಗೆ ವಿಶೇಷ ಪೂಜೆ, ರಥಾಂಗ ಹೋಮ, ರಥೋತ್ಸವ, ಮಧ್ಯಾಹ್ನ ತೀರ್ಥಪ್ರಸಾದ ಹಾಗೂ ಕಾರ್ಯಕ್ರಮಗಳು ಕೋವಿಡ್ ಎರಡನೇ ಅಲೆ ಕಾರಣ ಸಂಕ್ಷಿಪ್ತ ರೀತಿಯಲ್ಲಿ ಜರುಗಿದವು.

ಕೃಷ್ಣಮೂರ್ತಿ ದೇಸಾಯಿ ದಂಪತಿ ಹೋಮದ ಪುಣ್ಯಾಹುವಾಚನೆ ನೆರವೇರಿಸಿಕೊಂಡರು. ಸುಬ್ಬಣ್ಣಾಚಾರ್ಯ ಕಟ್ಟಿ, ಪಾಂಡುರಂಗಾಚಾರ್ಯ ಪಪ್ಪು, ಭೀಮಶೇನಾಚಾರ್ಯ ಪುರಾಣಿಕ, ಪ್ರಹ್ಲಾದ ಜೋಷಿ, ಗುರಾಚಾರ್ಯ ಪೂಜಾರ, ಮಧು ಆಚಾರ ಪೂಜಾರ, ಮುರಲಿ ಆಚಾರ ಪೂಜಾರ, ಶ್ರೀನಿವಾಸಾಚಾರ್ಯ ಜೋಷಿ, ಮುಂತಾದವರು ಹೋಮದ ವಿಧಿ ವಿಧಾನಗಳನ್ನು ಪೂರೈಸಿದರು.

ಪಿ.ಕೆ.ಪುರೋಹಿತ, ವಾದಿರಾಜ ಆಶ್ರೀತ, ವಿಜಯೀಂದ್ರ ಕುಲಕರ್ಣಿ, ಸುಮಂತ ಪುರಾಣಿಕ, ಪ್ರಹ್ಲಾದರಾಜ ದೇಸಾಯಿ, ದಾಮೋದರ ಹಯಗ್ರೀವ, ಪ್ರಹ್ಲಾದ, ಸುರೇಶಬಾಬು, ರಾಘವೇಂದ್ರ ಪುರೋಹಿತ, ಗುರುಪ್ರಸಾದ ಮುಜುಮದಾರ, ಪ್ರಶಾಂತ ಕುಲಕರ್ಣಿ, ಗಿರೀಶ ಪಟವಾರಿ, ಶಾಮಸುಂದರ ಪ್ಯಾಟಿ, ಶ್ರೀನಿವಾಸ ಜಹಗೀರದಾರ, ಲಕ್ಷ್ಮಣಾಚಾರ್ಯ ಹುನಗುಂದ, ಟಿ.ಜಿ.ಪುರೋಹಿತ, ಶಂಕರ ಕುಲಕರ್ಣಿ, ಸುಶಿಲೇಂದ್ರ ಕುಲಕರ್ಣಿ, ಜಗನ್ನಾಥ ಕುಲಕರ್ಣಿ ಇದ್ದರು. ಸೋಮವಾರ (ಮಾ.28) ಬೆಳಿಗ್ಗೆ ಅವಭೃತ ಸ್ನಾನ (ಓಕಳಿ), ಮಧ್ಯಾಹ್ನ ತೀರ್ಥ–ಪ್ರಸಾದ ಕಾರ್ಯಕ್ರಮಗಳೂ ಕೂಡ ಸಂಕ್ಷಿಪ್ತ ರೀತಿಯಲ್ಲಿ ಜರುಗಲಿವೆ ಎಂದು ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT