ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಮೀರಿದ ನಂತರ ವಿದ್ಯುತ್ ಬಿಲ್‌- ಜೆಸ್ಕಾಂ ಸಿಬ್ಬಂದಿ ಕ್ರಮಕ್ಕೆ ಆಕ್ರೋಶ

Last Updated 28 ನವೆಂಬರ್ 2021, 7:18 IST
ಅಕ್ಷರ ಗಾತ್ರ

ಕುಷ್ಟಗಿ: ಇಲ್ಲಿಯ ಜೆಸ್ಕಾಂ ಸಿಬ್ಬಂದಿ ವಿದ್ಯುತ್‌ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಪಾವತಿ ಕೊನೇ ದಿನದ ಅವಧಿ ಮುಗಿದ ನಂತರ ವಿದ್ಯುತ್‌ ಬಿಲ್‌ ನೀಡಿರುವುದು ಕಂಡುಬಂದಿದೆ.

ಪಟ್ಟಣದ ಮೂರನೇ ವಾರ್ಡಿನ ದಿ.ಯಂಕಪ್ಪ ಲೋಕರೆ ಎಂಬ ಹೆಸರಿನ ಗ್ರಾಹಕರ ಮನೆಗೆ ಗೃಹಬಳಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಮೀಟರ್‌ ರೀಡಿಂಗ್ ಪಡೆದ ಜೆಸ್ಕಾಂನ ಮೀಟರ್‌ ರೀಡರ್‌ ನ.25 ರಂದು ಬಿಲ್‌ ನೀಡಿದ್ದಾರೆ. ಆದರೆ, ಬಿಲ್‌ ಪಾವತಿಗೆ ನ.21 ಕೊನೆ ದಿನ ಎಂಬುದು ಬಿಲ್‌ನಲ್ಲಿ ನಮೂದಾಗಿದೆ. ಈ ಕುರಿತು ಜೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ ಕುಟುಂಬಸ್ಥರಾದ ಎ.ವೈ.ಲೋಕರೆ, ನಿಗದಿತ ಅವಧಿಯಲ್ಲಿ ಶುಲ್ಕದ ಮೊತ್ತ ಪಾವತಿಸದಿದ್ದರೆ ಬರುವ ತಿಂಗಳು ಬಡ್ಡಿ ವಿಧಿಸುತ್ತಾರೆ. ವಿಳಂಬವಾದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಾರೆ. ಅವರು (ಜೆಸ್ಕಾಂ) ಮಾಡುವ ತಪ್ಪಿಗೆ ಗ್ರಾಹಕರು ಅನಗತ್ಯವಾಗಿ ಬಡ್ಡಿ, ದಂಡದ ಹೊರೆ ಹೊರ ಹೊರಿಸುವಂಥದ್ದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಅವರು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT