ಯಾವುದೇ ಸಮುದಾಯಗಳ ಧಾರ್ಮಿಕ ಆಚರಣೆಗಳು ಏನೇ ಇದ್ದರೂ ಅವು ಸಮಾಜದ ಒಳಿತನ್ನು ಬಯಸುವಂತಿರಬೇಕು.
ಕರಿಬಸವ ಸ್ವಾಮೀಜಿ ಮದ್ದಾನಿ ಹಿರೇಮಠ
ಮಹಿಳೆಯರಿಂದಲೂ ರಕ್ತದಾನ ಶಿಬಿರದಲ್ಲಿ ಸುಮಾರು 240ಕ್ಕೂ ಅಧಿಕ ಜನರು ಸ್ವಯಂ ಪ್ರೇರಣೆಯಿಂದ ರಕ್ತ ನೀಡಿದರು. ಅಲ್ಲದೆ ಮುಸ್ಲಿಂ ಸಮುದಾಯದ ಅನೇಕ ಮಹಿಳೆಯರು ಕೆಲ ಹಿಂದೂ ಮಹಿಳೆಯರೂ ರಕ್ತದಾನ ನೀಡಿದ್ದು ಕಂಡುಬಂದಿತು. ರಾಜಾಸಾಬ್ ಮಾಟಲದಿನ್ನಿ ಸದ್ದಾಂ ಗುಮಗೇರಾ ಹುಸೇನ ಕಾಯಿಗಡ್ಡಿ ಖಾಜಾ ಕಮ್ಮಾರ ಶಾಮೀದ್ ಗೌಂಡಿ ಶಾಮೀದ ಕಂಟಿ ಮದರಬಾಷಾ ಭಾವಿಕಟ್ಟಿ ನೇತೃತ್ವದಲ್ಲಿ ಶಿಬಿರ ನಡೆಯಿತು.