ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ರಾಮನವಮಿ ಆಚರಣೆ: ವಿಶೇಷ ಪೂಜೆ ಸಲ್ಲಿಕೆ

Published 17 ಏಪ್ರಿಲ್ 2024, 15:43 IST
Last Updated 17 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ಆನೆಗೊಂದಿ ರಸ್ತೆಯಲ್ಲಿನ ರಾಮಮಂದಿರದಲ್ಲಿ ರಾಮನವಮಿ ನಿಮಿತ್ತ ಬುಧವಾರ ರಾಮದೇವರ ತೊಟ್ಟಿಲು ಪೂಜೆ ಕಾರ್ಯಕ್ರಮ ನಡೆಯಿತು.

ದೇವಸ್ಥಾನದಲ್ಲಿ ರಾಮ, ಲಕ್ಷ್ಮಣ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ನಂತರ ಭಜನಾ ಮಂಡಳಿಗಳಿಂದ ಭಜನೆ, ಪಾರಾಯಣ, ಸಹಸ್ರನಾಮವಳಿ ನಡೆದವು. ನೂರಾರು ಭಕ್ತರು ರಾಮದೇವರ ತೊಟ್ಟಿಲು ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಮಾಲಾಧಾರಿಗಳಿಂದ ಪಾನಕ ವಿತರಣೆ: ರಾಮನವಮಿ ನಿಮಿತ್ತ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಹನುಮಮಾಲಾಧಾರಿಗಳು ಸಾರ್ವಜನಿಕರು ಪಾನಕ ವಿತರಿಸಿದರು. ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಗಂಗಾವತಿ ಕೃಷ್ಣದೇವರಾಯ ವೃತ್ತದಲ್ಲಿ ರಾಮನವಮಿಯ ಅಂಗವಾಗಿ ಬುಧವಾರ ಹನುಮಮಾಲಾಧಾರಿಗಳಿಂದ ಸಾರ್ವಜನಿಕರಿಗೆ ಪಾನಕ ವಿತರಣೆ ಮಾಡಲಾಯಿತು
ಗಂಗಾವತಿ ಕೃಷ್ಣದೇವರಾಯ ವೃತ್ತದಲ್ಲಿ ರಾಮನವಮಿಯ ಅಂಗವಾಗಿ ಬುಧವಾರ ಹನುಮಮಾಲಾಧಾರಿಗಳಿಂದ ಸಾರ್ವಜನಿಕರಿಗೆ ಪಾನಕ ವಿತರಣೆ ಮಾಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT