ಕೊಪ್ಪಳ: ಜಿಲ್ಲೆಯಾದ್ಯಂತ ಮುಂಗಾರು ಮಳೆಗೆ ಗ್ರಾಮಗಳ ನೂರಾರು ರಸ್ತೆಗಳು ಹಾಳಾಗಿ ಹೋಗಿದ್ದರೂ ದುರಸ್ತಿ ಕೈಗೊಳ್ಳಲು ವಿಳಂಬ ಅನುಸರಿಸುತ್ತಿರುವುದರಿಂದ ವಾಹನ ಸವಾರರ, ಪ್ರಯಾಣಿಕರ ಗೋಳು ಹೇಳತೀರದಾಗಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗದ ಮತ್ತು ಒಳ ರಸ್ತೆಗಳು ಬಹುತೇಕ ಹದಗೆಟ್ಟು ಹೋಗಿದ್ದರೂ ಅವುಗಳ ದುರಸ್ತಿಗೆ ಮುಂದಾಗುತ್ತಿಲ್ಲ. ಕೆಲವು ತಾಂತ್ರಿಕ ಮತ್ತು ಬಗೆ ಹರಿಸದ ಕಾರಣಗಳಿಂದ ರಸ್ತೆಯ ಪರಿಸ್ಥಿತಿ ಮತ್ತಷ್ಟು ಅದ್ವಾನವಾಗಿದೆ.

ಕೊಪ್ಪಳ ತಾಲ್ಲೂಕಿನ ಗಿಣಗೇರಾ, ಕಾಸನಕಂಡಿ, ಅಳವಂಡಿ ಸೇರಿದಂತೆ ಅತ್ಯಂತ ಮುಖ್ಯವಾದ ಗ್ರಾಮಗಳ ಮತ್ತು ಹೋಬಳಿ ರಸ್ತೆಗಳನ್ನು ನೋಡಿದರೆ ಅದ್ವಾನ ಪರಿಸ್ಥಿತಿ ಕಂಡು ಬರುತ್ತದೆ. ಇಲ್ಲಿ ಭಾರವಾದ ವಾಹನ ಗಳು, ನೂರಾರು ಕೈಗಾರಿಕೆಗಳ ವಾಹನಗಳು ಚಲಿಸುತ್ತಿರುವುದರಿಂದ ಸುಮಾರು 40 ಗ್ರಾಮಗಳ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ಇದೆ.

ಮುಂಡರಗಿಯಿಂದ ಕೊಪ್ಪಳಕ್ಕೆ ಬರುವುದೇ ಹರಸಾಹಸ ಎಂಬಂತೆ ಆಗಿದೆ. ಕಾಸನಕಂಡಿ, ಹಿರೇಸಿಂದೋಗಿ, ಹಾಲವರ್ತಿ ಮುಂತಾದ ಗ್ರಾಮಗಳ ರಸ್ತೆಗಳು ಗುಂಡಿಗಳಲ್ಲಿ ಕಳೆದು ಹೋಗಿವೆ. ಇವುಗಳನ್ನು ತಾತ್ಕಾಲಿಕ ದುರಸ್ತಿ ಮಾಡಲು ಕೂಡಾ ಲೋಕೋಪಯೋಗಿ ಇಲಾಖೆಗೆ ಸಾಧ್ಯವಿಲ್ಲದಷ್ಟು ಹದಗೆಟ್ಟು ಹೋಗಿವೆ.

ಜಿಲ್ಲಾಡಳಿತ, ಕೈಗಾರಿಕೆಗಳ ಮುಸುಕಿನ ಗುದ್ದಾಟ
ಈ ರಸ್ತೆಗಳು ಹಾಳಾಗಲು ಇಲ್ಲಿನ ನೂರಾರು ಬೃಹತ್ ಕಾರ್ಖಾನೆಗಳ ಉತ್ಪನ್ನಗಳನ್ನು ಸಾಗಿಸುವ ಸಾವಿರಾರು ಭಾರವಾದ ಟ್ರಕ್, ಕಂಟೈನರ್ಗಳು ಕಾರಣವಾಗಿವೆ. ಈ ರಸ್ತೆಗಳ ದುರಸ್ತಿ ಮಾಡಿಕೊಡುವಂತೆ ಕಾರ್ಖಾನೆ ಮಾಲೀಕರೊಂದಿಗೆ ಅನೇಕ ಸಭೆ ನಡೆಸಿದರೂ ಯಾವುದೇ ಪರಿಹಾರ ದೊರಕಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರೂ ಯಾವುದೇ ಸಹಕಾರ ದೊರೆಯುತ್ತಿಲ್ಲ.

ಕಾರ್ಖಾನೆಗಳ ಮಾಲೀಕರು ನಾವು ನೂರಾರು ಕೋಟಿ ಬಂಡವಾಳ ಹೂಡಿ ಸರ್ಕಾರಕ್ಕೆ ರಾಜಧನ ಕಟ್ಟುತ್ತೇವೆ. ಎಲ್ಲ ಮೂಲಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿ ನಮ್ಮನ್ನು ಇಲ್ಲಿಗೆ ಕರೆ ತಂದಿದ್ದೀರಿ, ಈಗ ಕೋಟಿಗಟ್ಟಲೆ ಖರ್ಚು ಮಾಡಿ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂದರೆ ಹೇಗೆ? ಅಲ್ಲದೆ ಸಿಎಸ್ಆರ್ ಅನುದಾನದಲ್ಲಿ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಹಣ ಕೂಡಾ ನೀಡುತ್ತಿದ್ದೇವೆ ಎಂಬುವುದುಅವರ ವಾದ.

ರಾಜ್ಯ ಹೆದ್ದಾರಿ ಎಂಬ ನೆಪ
ಶಿಗ್ಗಾವಿ-ಕಲ್ಮಲಾ ರಾಜ್ಯ ಹೆದ್ದಾರಿ ಮುಂಡರಗಿ, ಅಳವಂಡಿ, ಕೊಪ್ಪಳ, ಹೊಸಳ್ಳಿ ಗ್ರಾಮದ ಮೂಲಕ ಹಾಯ್ದು ಹೋಗಬೇಕು. ಈ ರಸ್ತೆ ನಿರ್ಮಾಣಕ್ಕೆ ಇನ್ನೂ ಯಾವುದೇ ಅನುದಾನ ಬಂದಿಲ್ಲ. ಹೀಗಾಗಿ ರಸ್ತೆ ದುರಸ್ತಿಗೆ ಹಣ ಯಾಕೆ ಹಾಕಬೇಕು ಎಂದು ಕೆಲವು ಇಲಾಖೆಗಳು ಮತ್ತು ಜನಪ್ರತಿನಿಧಿಗಳು ನಿರಾಸಕ್ತಿ ತಳೆದಿದ್ದಾರೆ.

ಗಜೇಂದ್ರಗಡ-ಸಿಂಧನೂರುಗೆ ಹೋಗುವ ಹೆದ್ದಾರಿಯದ್ದು ಇನ್ನೊಂದು ಕಥೆ. ಕುಷ್ಟಗಿ ಮೂಲಕ ಹಾದು ಹೋಗುವ ಈ ರಸ್ತೆಯನ್ನು ಅವರು ಮಾಡಲಿ ಎಂದು ಇವರು, ಇವರು ಮಾಡಲಿ ಎಂದು ಅವರು ಎಂದು ಅವಗಣನೆಗೆ ಒಳಗಾಗಿದೆ. ಹೀಗಾಗಿ ರಸ್ತೆಗಳಲ್ಲಿ ಸಂಚಾರ ಮಾಡುವುದೇ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.

ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಭಾಗದಲ್ಲಿ ರಸ್ತೆಗಳ ಸಮಸ್ಯೆ ಇದ್ದರೆ, ಯಲಬುರ್ಗಾ ತಾಲ್ಲೂಕಿನಲ್ಲಿ ಮಳೆಗೆ ನೆಲಮಟ್ಟದ ಸೇತುವೆಗಳು ಕೊಚ್ಚಿಕೊಂಡು ಹೋಗಿ ಸಂಚಾರ ಬಂದ್ ಆಗಿತ್ತು. ಇದರಿಂದ ಅಭಿವೃದ್ಧಿಯ ಮುಖ ಅನಾವರಣಗೊಂಡಿತ್ತು. ಕಾರಟಗಿ ಮತ್ತು ಗಂಗಾವತಿ ಭಾಗದಲ್ಲಿ ಕಾಲುವೆ, ಭತ್ತದ ಗದ್ದೆಗಳಿಂದ ನೀರಿನ ತೇವದಿಂದ ರಸ್ತೆಗಳು ಹಾಳಾಗಿದ್ದು, ಕೆಲವು ಗ್ರಾಮಕ್ಕೆ ಇನ್ನೂ ಡಾಂಬರ್ ರಸ್ತೆ ಭಾಗ್ಯ ಕೂಡಾ ಬಂದಿಲ್ಲ.

ಕೊಪ್ಪಳ, ಗಂಗಾವತಿ ಮಾರ್ಗದ ಗಿಣಗೇರಾದ 18 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದರಿಂದ ಸಂಚಾರದ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಈ ಎಲ್ಲ ಸಮಸ್ಯೆಗಳ ಮಧ್ಯೆ ಗುತ್ತಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನಿರಾಳತೆ ಉಂಟಾಗಿದ್ದು, ಗದಗದಿಂದ ಹೊಸಪೇಟೆಗೆ ಪ್ರಯಾಣ ಸುಲಭ ಮತ್ತು ಸುಗಮವಾಗಿದೆ.

ಭಾನಾಪುರ, ಗಿಣಗೇರಾ ರೈಲು ಸೇತುವೆ, ಮೇಲ್ಮಟ್ಟದ ಸೇತುವೆ ಕಾಮಗಾರಿಗಳು ಪೂರ್ಣಗೊಂಡರೆ ಈ ಹೆದ್ದಾರಿ ಉದ್ಘಾಟನೆಗೆ ಸಿದ್ಧವಾಗಲಿದೆ. ಆದರೆ ರಾಜ್ಯ ಹೆದ್ದಾರಿ, ಗ್ರಾಮೀಣ ಭಾಗದ ರಸ್ತೆಗಳ ಅವ್ಯವಸ್ಥೆ ಇನ್ನೂ ಮುಂದುವರಿದಿದೆ. ಇದಕ್ಕೆ ನೂರಾರು ಕೋಟಿ ಹಣ ಬೇಕಾಗಿರುವುದರಿಂದ ಸರ್ಕಾರ ಹಂತ, ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರೆ, ವಿರೋಧ ಪಕ್ಷದ ಶಾಸಕರು ರಸ್ತೆ ದುರಸ್ತಿಗೆ ಹಣವನ್ನೇ ನೀಡುತ್ತಿಲ್ಲ ಎಂದು ಆರೋಪಿಸುವುದು ಸಾಮಾನ್ಯವಾಗಿದೆ.

ಗಡಿ ಭಾಗದಲ್ಲಿ ಕಾಣದ ರಸ್ತೆ ಅಭಿವೃದ್ಧಿ
ಅಳವಂಡಿ: ಕೊಪ್ಪಳ ಜಿಲ್ಲೆಯ ಗಡಿಭಾಗದ ಅಳವಂಡಿ ಹೋಬಳಿ ರಸ್ತೆಗಳು ಸುಮಾರು ವರ್ಷಗಳಿಂದ ಹದಗೆಟ್ಟು ಹೋಗಿದ್ದರೂಅಭಿವೃದ್ಧಿ ಆಗುತ್ತಿಲ್ಲ. ಈ ರಸ್ತೆ ದುರಸ್ತಿಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲ ಎನ್ನುವುದು ಇಲ್ಲಿಯ ಜನರ ಅಸಮಾಧಾನವಾಗಿದೆ.

ಈ ರಸ್ತೆಯಲ್ಲಿ ಪ್ರಯಾಣಿಕರು ಹಾಗೂ ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಸಮೀಪದ ಘಟ್ಟಿರಡ್ಡಿಹಾಳದಿಂದ ಮುಂಡರಗಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ಸುಮಾರು 15-20 ವರ್ಷಗಳಿಂದ ಹಾಳಾಗಿದ್ದು ಇದನ್ನು ದುರಸ್ತಿ ಮಾಡುತ್ತಿಲ್ಲ. ಇಲ್ಲಿನ ಜನ ಸಂಬಂಧ ಪಟ್ಟವರಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಈ ರಸ್ತೆ ಕೊಪ್ಪಳ ಜಿಲ್ಲಾ ಗಡಿ ಪ್ರದೇಶ ರಸ್ತೆಯಾಗಿದೆ. ರಸ್ತೆಮೂಲಕ ಬನ್ನಿಕೊಪ್ಪ, ಕುಕನೂರ, ಯಲಬುರ್ಗಾ, ಕೊಪ್ಪಳ ನಗರಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ನಿತ್ಯ ಈ ರಸ್ತೆಮೂಲಕ ನೂರಾರು ಜನ ವಾಹನ ಸವಾರರು ಓಡಾಡುತ್ತಾರೆ. ಇಲ್ಲಿ ಹಗಲ್ಲಿನಲ್ಲಿಯೇ ಸಂಚರಿಸಲು ಭಯವಾಗುತ್ತಿದೆ.

ರಾತ್ರಿ ವೇಳೆ ವಾಹನ ಸವಾರರು ಸ್ಪಲ್ಪ ಮೈ ಮರೆತರೇ ಅಪಾಯ ತಪ್ಪದು ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು. ರಸ್ತೆ ತಗ್ಗುಗುಂಡಿಗಳಿಂದ ಕೂಡಿದ್ದು, ಮಳೆ ಬಂದರೆ ಜಲಾವೃತವಾಗುತ್ತದೆ. ಇದರಿಂದ ವಾಹನ ಸವಾರರು ಪರದಾಡುವಂಥ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು, ಸಂಸದರು, ಶಾಸಕರು ರಸ್ತೆ ಅಭಿವೃದ್ಧಿ ಪಡಿಸಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಅಗ್ರಹವಾಗಿದೆ.

ರಘುನಾಥನಹಳ್ಳಿ ಗ್ರಾಮದ ಸೇತುವೆ ಮೇಲೆ ರಸ್ತೆ ಹಾಳಾಗಿದ್ದು, ಮಳೆ ಬಂದು ಸಂಪೂರ್ಣ ಜಲಾವೃತವಾಗಿ ಸಂಚಾರ ಬಂದ್ ಆಗುತ್ತದೆ. ಈ ರಸ್ತೆ ರಾಜ್ಯ ಹೆದ್ದಾರಿ ಕೂಡವಾಗಿದೆ. ಅಳವಂಡಿಯಿಂದ ಹಿರೇಸಿಂದೋಗಿವರೆಗೆ 17 ಕಿ.ಮೀ ರಸ್ತೆ ಬಹುತೇಕ ಹದಗೆಟ್ಟಿದೆ. ಕಳೆದ 15 ದಿನಗಳ ಹಿಂದೆ ಗುಂಡಿ ಮುಚ್ಚಲಾಗಿದ್ದು, ಆದರೆ, ಜೋರು ಮಳೆಗೆ ಮತ್ತೆ ಗುಂಡಿ ನಿರ್ಮಾಣವಾಗಿ ತನ್ನ ನೈಜ ರೂಪವನ್ನು ತೋರಿಸಿದೆ. ಹಣ ಹಾಕಿದ್ದು ಕೂಡಾ ವ್ಯರ್ಥ್ಯವಾಗಿದೆ. ಘಟ್ಟಿರಡ್ಡಿಹಾಳ-ಮುರ್ಲಾಪುರ, ಮುಂಡರಗಿ, ಅಳವಂಡಿ, ಭೈರಾಪುರ, ಸಿಂದೋಗಿ, ಗಡಿಯಾರ ಕಂಭದರಸ್ತೆಗಳು ಹಾಗೆ ಗುಂಡಿ ಬಿದ್ದು ಪ್ರಯಾಸದಿಂದ ಸಂಚಾರ ಮಾಡಬೇಕಾಗಿದೆ.

ರಸ್ತೆಗಳ ತುಂಬ ಗುಂಡಿಯೋ ಗುಂಡಿ
ಗಂಗಾವತಿ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಗರ ಪ್ರದೇಶಕ್ಕೆ ಸಂಚಾರ ಮಾಡುವ ರಸ್ತೆಗಳು ತಗ್ಗುಗಳಿಂದ ಕೂಡಿದ್ದು, ವಾಹನಗಳ ಸಂಚಾರ ದುಸ್ಥರವಾಗಿದೆ.

ಹಳ್ಳಿಗಳಿಂದ ನಗರ ಸಂಪರ್ಕಿಸುವ ರಸ್ತೆಗಳು ಮಳೆ ಬಂದರೆ ಸಾಕು ಕೆಸರುಮಯವಾಗಿರುತ್ತವೆ. ಜೊತೆಗೆ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿರುವ ದೃಶ್ಯಗಳು ಕಂಡು ಬರುತ್ತವೆ. ನಿತ್ಯ ನಗರಕ್ಕೆ ಸಾವಿರಾರು ಜನರು ವಿವಿಧ ರೀತಿ ಕೆಲಸ ಕಾರ್ಯಗಳ ಮೇಲೆ ಆಗಮಿಸುತ್ತಿದ್ದು, ಜೀವ ಅಂಗೈಯಲ್ಲಿ ಇಟ್ಟುಕೊಂಡು ವಾಹನ ಸವಾರ ಮಾಡುತ್ತಾರೆ. ಹಳ್ಳಿಗಳಲ್ಲಿ 10 ಕಿ.ಮೀ ರಸ್ತೆಯನ್ನು 30 ನಿಮಿಷ ಸಂಚಾರ ಮಾಡುವ ದುಸ್ಥಿತಿ ಎದುರಾಗಿದೆ. ತುರ್ತು ವೇಳೆಯಲ್ಲಿ ಆಸ್ಪತ್ರೆಗೆ ತೆರಳಬೇಕಾದ ಸನ್ನಿವೇಶ ಎದುರಾದರೆ, ಜನರ ಪಾಡು ಹೇಳತೀರದು. ಹಳ್ಳಿಗಳಲ್ಲಿ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ದ್ವಿಚಕ್ರ ವಾಹನ, ಟ್ರಾಕ್ಟರ್ಗಳ ಸಂಚಾರದಿಂದ ಮಣ್ಣು ಕೂಡಲೇ ಕಿತ್ತು ಹೋಗುತ್ತದೆ.

ಮಳೆಗಾಲದಲ್ಲಿ ನೀರಿನ ರಭಸಕ್ಕೆ ರಸ್ತೆಯ ಮಣ್ಣು ಹೊಲಗಳಿಗೆ ಕೊಚ್ಚಿ ಹೋಗುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ತಾತ್ಕಾಲಿಕವಾಗಿ ಮೊರಂ ಹಾಕಿ ಬಿಡುತ್ತಾರೆ. ಅದು ಮತ್ತೆ ಎರಡು ದಿನಗಳ ಒಳಗೆ ಮಣ್ಣು ಕೊಚ್ಚಿ ಹೋಗುತ್ತವೆ. ಇದರಿಂದ ರಸ್ತೆಗಳು ಕಿರಿದಾಗಿ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತವೆ. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಸೇರಿ ಒಟ್ಟು 230ಕ್ಕೂ ಹೆಚ್ಚು ಕಿ.ಮೀ ರಸ್ತೆ ಎಇಇ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಈ ರಸ್ತೆಗಳ ಕಾಮಗಾರಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲಿನ ಆನೆಗೊಂದಿ, ಮರಳಿ, ಚಿಕ್ಕಮಾದಿನಾಳ ಹೋಬಳಿಗಳ ರಸ್ತೆಗಳು ಗುಂಡಿಗಳಿಂದಾಗಿ ಹದೆಗಟ್ಟಿವೆ.

ಪೂರಕ ಮಾಹಿತಿ: ಜುನಸಾಬ್ ವಡ್ಡಟ್ಟಿ, ಎನ್.ವಿಜಯ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.