ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು | ಸಂತ ಸೇವಾಲಾಲ್‌ ಜಯಂತಿ ಆಚರಣೆ

Published 28 ಫೆಬ್ರುವರಿ 2024, 15:03 IST
Last Updated 28 ಫೆಬ್ರುವರಿ 2024, 15:03 IST
ಅಕ್ಷರ ಗಾತ್ರ

ಕುಕನೂರು: ಸಂತರು ಹಾಗೂ ಮಹಾ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅವರ ಸೇವೆ ಸ್ಮರಿಸಬೇಕು’ ಎಂದು ತಹಶೀಲ್ದಾರ್ ಅಶೋಕ್ ಶಿಗ್ಗಾವಿ ಹೇಳಿದರು.

ಶಾದಿಮಹಲ್‌ನಲ್ಲಿ ಬಂಜಾರ ಸಮಾಜದ ವತಿಯಿಂದ ಯೋಜಿಸಿದ್ದ ಸಂತ ಸೇವಾಲಾಲ್‌ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ಮಹಾ ಪುರುಷರು ಸ್ವಾರ್ಥ ಬದಿಗೊತ್ತಿ ಸಮಾಜದ ಒಳಿತಾಗಿ ಬದುಕು ಸವಿಸಿದ್ದಾರೆ. ಶೋಷಿತ ಬಂಜಾರ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಂತ ಸೇವಾಲಾಲ್​ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಆಚಾರ, ವಿಚಾರ, ಧರ್ಮಬೋಧನೆ ಮಾಡಿ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದಾರೆ ಎಂದರು.

ಸೇವಾಲಾಲ್ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ಡಿಜೆ ಸೌಂಡ್‌ಗೆ ಸಮಾಜದ ಮುಖಂಡರು, ಮಹಿಳೆಯರು ಹೆಜ್ಜೆಹಾಕಿದರು. ಉದ್ಯಮಿ ಅನಿಲ್ ಆಚಾರ್, ಮುಖಂಡ ಶಿವಕುಮಾರ ಗುಳಗಣ್ಣವರ್ ಮೆರವಣಿಗೆಗೆ ಚಾಲನೆ ನೀಡಿದರು.

ಅನ್ನದಾನೇಶ್ವರಮಠದ ಮಹಾದೇವ ಸ್ವಾಮೀಜಿ, ಗುರು ಗೋಸಾವಿ ಬಾವಾನವರು ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್ ಬಿರಾದಾರ, ಸಮಾಜದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ್, ಸೋಮಶೇಖರ್ ನಿಲೋಗಲ್, ಮೇಘರಾಜ ಬಳಗೇರಿ, ಸುರೇಶ ಬಳೂಟಗಿ, ಯಮನೂರಪ್ಪ ಕಟ್ಟಿಮನಿ, ರಾಮಣ್ಣ ಭಜಂತ್ರಿ, ರಶೀದ್‌ಸಾಬ ಹಣಜಗಿರಿ, ಲಚ್ಚಪ್ಪ ನಾಯಕ, ದೇವೆಂದ್ರಪ್ಪ ರಾಠೋಡ, ಓಬಪ್ಪ ಲಮಾಣಿ, ರವಿ ಕಾರಬಾರಿ, ಚಂದ್ರು ಭಾನಾಪೂರ, ಅಂಬಣ್ಣ ಕಟ್ಟಿಮನಿ, ಯಲ್ಲಪ್ಪ ಮನ್ನಾಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT