ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಕಾಲ್ನಡಿಗೆಯಲ್ಲೇ ಶಾಲೆಗೆ: ತಪ್ಪದ ಸಮಸ್ಯೆ

ಪ್ರತಿದಿನ 5 ರಿಂದ 10 ಕಿ.ಮೀ ವಿದ್ಯಾರ್ಥಿಗಳ ಪಾದಯಾತ್ರೆ
Last Updated 7 ಸೆಪ್ಟೆಂಬರ್ 2021, 4:01 IST
ಅಕ್ಷರ ಗಾತ್ರ

ಅಳವಂಡಿ: ಶಾಲಾ ಪ್ರಾರಂಭ ದಿನದಿಂದ ಪ್ರತಿದಿನ 5-10 ಕಿ.ಮೀ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕು. ಅದರಲ್ಲೂ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಇದ್ದರೂ ಬಸ್‌ ಇಲ್ಲ. ಕೋವಿಡ್ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆದ ಬಸ್‌ಗಳು ಇನ್ನೂ ಸಂಚಾರ ಆರಂಭಿಸಿಲ್ಲ.

ಜಿಲ್ಲೆಯ ದೊಡ್ಡ ಹೋಬಳಿಗಳಲ್ಲಿ ಒಂದಾದ ಅಳವಂಡಿ ಭಾಗದ ಸುತ್ತಮುತ್ತಲಿನ ಗ್ರಾಮಗಳ ಸಮಸ್ಯೆ ಇದು.ಕೋವಿಡ್ ಮಾರ್ಗಸೂಚಿ ಮೂಲಕ ಶಾಲಾ ಕಾಲೇಜು ಆರಂಭಿಸಲಾಗಿದೆ. ನಿಗದಿತ ಸಮಯಕ್ಕೆ ಬಸ್ ಸಂಚಾರ ಇಲ್ಲದೆ ಅಳವಂಡಿಗೆವಿದ್ಯಾರ್ಥಿಗಳು ನಡೆದುಕೊಂಡೇ ಬರುತ್ತಾರೆ.

ಅಳವಂಡಿ ವ್ಯಾಪ್ತಿಯ ಮೋರನಾಳ ಗ್ರಾಮದಿಂದ ಅಳವಂಡಿ ಪ್ರೌಢಶಾಲೆ ಹಾಗೂ ಕಾಲೇಜಿಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಕಲಿಯಲು ತಮ್ಮೂರಿಂದ ಸುಮಾರು 5-10 ಕಿ.ಮೀ ದೂರ ಕ್ರಮಿಸಿ ಬರಬೇಕು. ಶಾಲೆಗೆ ಹೋಗುವ ಉತ್ಸಾಹದಿಂದ ಮಕ್ಕಳು ಕಷ್ಟವಾದರೂ ಶಾಲೆಗೆ ನಡೆದುಕೊಂಡೇ ಬರುತ್ತಾರೆ.

ಆ.23ರಿಂದ ಪ್ರೌಢಶಾಲೆ, ಕಾಲೇಜು ಆರಂಭವಾದರೂ ಇಂದಿಗೂ ನಿತ್ಯ ಬಸ್‌ಗಳು ಬರುವುದಿಲ್ಲ. ಸದಾ ಒಂದಿಲ್ಲೊಂದು ಸಮಸ್ಯೆ. ಮೋರನಾಳ ಗ್ರಾಮದಿಂದ ಅಳವಂಡಿ ಮಾರ್ಗವಾಗಿ ಮುಂಡರಗಿಗೆ ಸಂಚ ರಿಸುವ ಬಸ್‌ಗಳಿವೆ.ಅದರಲ್ಲಿ ಕೆಲವು ಬಸ್‌ ಬಂದ್ ಆಗಿವೆ. ಈ ಮಾರ್ಗವಾಗಿ ಕೆಲವೊಂದು ಬಸ್ ಆಗೊಮ್ಮೆ,ಈಗೊಮ್ಮೆ ಬಂದು ಹೋಗುತ್ತಿವೆ.

ಆದರೆ ಈ ಹಿಂದೆ ಶಾಲೆಯ ಸಮಯಕ್ಕೆ ಸಂಚರಿಸುತ್ತಿದ್ದ ಬಸ್‌ಗಳು ಶಾಲೆಗಳು ಫ್ರಾರಂಭವಾದರೂ ಪ್ರಾರಂಭವಾಗಿಲ್ಲ. ಹಾಗಾಗಿ ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದಾರೆ.

‘ನಿತ್ಯ 5-10 ಕಿ.ಮೀ ದೂರ ಕ್ರಮಿಸಿ ಶಾಲೆಗೆ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಆಗಲು ಆಗುತ್ತಿಲ್ಲ. ಹಾಗಾಗಿ ಕೂಡಲೇ ಅಧಿಕಾರಿಗಳು ಬಸ್ ಸಂಚಾರ ಆರಂಭಿಸಬೇಕು’ ಎಂದು ವಿದ್ಯಾರ್ಥಿಗಳಾದಗಾಯತ್ರಿ, ಮಂಜುಳಾ, ಕಾವ್ಯ, ಲಕ್ಷ್ಮಿ ಹೊರಪೇಟಿ, ಸುನಿತಾ, ಕವಿತಾ, ಕಾವ್ಯ, ತೇಜಸ್ವಿನಿ ಅಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT