ಅಳವಂಡಿ: ‘ನಾಟಕಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಅದರ ತಿರುಳನ್ನು ಅರಿತು ಸತ್ಯಾಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಗ್ರಾ.ಪಂ ಸದಸ್ಯ ಗುರು ಬಸವರಾಜ ಹಳ್ಳಿಕೇರಿ ಹೇಳಿದರು.

ಸಮೀಪದ ಬೈರಾಪುರ ಗ್ರಾಮದ ದುರ್ಗಾದೇವಿ ಹಾಗೂ ತಾಯಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮಾರುತೇಶ್ವರ ನಾಟ್ಯ ಸಂಘದ ವತಿಯಿಂದ ಆಯೋಜಿಸಿದ್ದ ‘ಮತ್ತೆ ಪಡೆದ ಮುತ್ತೈದೆ ಭಾಗ್ಯ’ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ಮುಖಂಡ ಮಹಾಂತೇಶ ಸಿಂದೋಗಿಮಠ ಮಾತನಾಡಿ, ‘ಗ್ರಾಮಿಣ ಪ್ರದೇಶದ ಯುವ ಕಲಾವಿದರು ರಂಗಭೂಮಿ ಕಲೆಯನ್ನು ಉಳಿಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾಟಕಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ’ ಎಂದರು.

ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ, ಹೊನ್ನಪ್ಪ ಗೌಡ, ನಿಂಗಪ್ಪ ಮೇಟಿ, ಅನ್ವರ್ ಗಡಾದ, ನಿಂಗನಗೌಡ, ಹೊನ್ನಕೇರಪ್ಪ, ನಿಂಗಪ್ಪ, ಕೃಷ್ಣಪ್ಪ, ವೆಂಕಟೇಶ, ಧರ್ಮಣ್ಣ, ವೀರಯ್ಯ, ಹನುಮೇಶ, ಯಲ್ಲಪ್ಪ, ದೇವಪ್ಪ, ಬಸಯ್ಯ, ಪೀರಸಾಬ, ರಾಜಾಸಾಬ್, ಶರಣಪ್ಪ, ರಮೇಶ, ಪಕೀರಸಾಬ, ಮೈಲಾರಪ್ಪ, ಮಾರುತಿ, ಯಲ್ಲಪ್ಪ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.