ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ಸಂಚಾರ ವ್ಯವಸ್ಥೆ; ಈಗಲಾದರೂ ಬರುವುದೇ ಶಿಸ್ತು?

ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲನೆಗೆ ಪೊಲೀಸರ ಶ್ರಮ, ಜನರಿಂದಲೂ ಬೇಕಿದೆ ಸಹಕಾರ
Published : 29 ಜುಲೈ 2024, 6:09 IST
Last Updated : 29 ಜುಲೈ 2024, 6:09 IST
ಫಾಲೋ ಮಾಡಿ
Comments
ಕೊಪ್ಪಳದ ಅಶೋಕ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು –

ಕೊಪ್ಪಳದ ಅಶೋಕ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು –

ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ

ಸಂಚಾರ ಶಿಸ್ತಿಗೆ ಆದ್ಯತೆ: ಎಸ್‌.ಪಿ.
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎನ್ನುವುದನ್ನು ಈಗಾಗಲೇ ವಾಹನಗಳ ಸವಾರರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಇದಕ್ಕಾಗಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜನರಲ್ಲಿಯೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಬೇಕು. ಅವರೂ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹೇಳಿದರು. ಸಂಚಾರ ಪೊಲೀಸರನ್ನು ಹಬ್ಬಕ್ಕೆ ಬೇರೆಡೆ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಸಂಚಾರ ಶಿಸ್ತಿನ ಮೇಲೆ ಪರಿಣಾಮ ಬೀರುತ್ತಿದೆಯಲ್ಲವೇ ಎನ್ನುವ ಪ್ರಶ್ನೆಗೆ ‘ಸಾಧ್ಯವಾದಷ್ಟು ಅವರನ್ನು ಬಂದೋಬಸ್ತ್‌ ಕೆಲಸಕ್ಕೆ ನಿಯೋಜಿಸುವುದನ್ನು ತಡೆಯಲಾಗುವುದು. ಅನಿವಾರ್ಯವಾದರೆ ನಿಯೋಜಿಸಬೇಕಾಗುತ್ತದೆ. ಕೊಪ್ಪಳ ನಗರದ ಹಲವು ಪಾರ್ಕಿಂಗ್ ಸ್ಥಳಗಳು ಒತ್ತುವರಿಯಾಗಿರುವ ಮಾಹಿತಿಯಿದ್ದು ಈ ಬಗ್ಗೆ ನಗರಸಭೆಯಿಂದ ಮಾಹಿತಿ ಪಡೆದುಕೊಂಡು ಹಂತಹಂತವಾಗಿ ಸುಧಾರಣೆ ಮಾಡಲಾಗುವುದು’ ಎಂದರು.
ಹೆಲ್ಮೆಟ್‌ ಕಡ್ಡಾಯ ಯಾವಾಗ?
ಬೆಂಗಳೂರಿನಂಥ ಮಹಾನಗರದಲ್ಲಿ ವಾಹನ ಸವಾರ ಮಾತ್ರವಲ್ಲ; ಹಿಂಬದಿ ಸವಾರನಿಗೂ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದೆ. ಧರಿಸದಿದ್ದರೆ ನೂರಾರು ರೂಪಾಯಿ ದಂಡ ಕಟ್ಟಡಬೇಕಾಗುತ್ತದೆ. ಆದರೆ ಕೊಪ್ಪಳದಲ್ಲಿ ಮಾತ್ರ ಹೆಲ್ಮೆಟ್‌ ನಿಯಮ ಲೆಕ್ಕಕ್ಕೆ ಇಲ್ಲದಂತಾಗಿದೆ. ನಗರ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿರುವ ಅನೇಕ ಅಪಘಾತಗಳಲ್ಲಿ ಹೆಲ್ಮೆಟ್‌ ಇಲ್ಲದ ಕಾರಣಕ್ಕೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮೃತಪಡುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದ್ದರಿಂದ ತಲೆಯ ರಕ್ಷಣೆಗೆ ಹೆಲ್ಮೆಟ್‌ ಕಡ್ಡಾಯ ನಿಯಮ ಅನುಷ್ಠಾನಗೊಳ್ಳುವ ಅಗತ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT