ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮನಾಭ ತೀರ್ಥರ ಆರಾಧನೆ: ಉಭಯ ಮಠಗಳಿಗೆ ತಲಾ ಒಂದೂವರೆ ದಿನ ಅವಕಾಶ

Published 9 ಡಿಸೆಂಬರ್ 2023, 7:12 IST
Last Updated 9 ಡಿಸೆಂಬರ್ 2023, 7:12 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿಯ ನವವೃಂದಾವನ‌ಗಡ್ಡೆಯಲ್ಲಿ ತಲಾ ಒಂದೂವರೆ ದಿನ ಪದ್ಮನಾಭ ತೀರ್ಥರ ಆರಾಧನೆ ನಡೆಸಲು ರಾಯರ ಮಠ ಹಾಗೂ ಉತ್ತರಾದಿ ಮಠಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದೆ‌.

ಡಿ. 10 ಹಾಗೂ 11ರ ಮಧ್ಯಾಹ್ನದ ತನಕ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದವರಿಂದ ಆರಾಧನೆ ಅಂಗವಾಗಿ ಪೂಜೆ ನಡೆಯಲಿದೆ. ಮಧ್ಯಾಹ್ನದ ಬಳಿಕದಿಂದ ಡಿ. 12ರ ರವರೆಗೆ ಉತ್ತರಾದಿ ಮಠದವರಿಗೆ ಆರಾದನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಪದ್ಮನಾಭ ತೀರ್ಥರ ಪೂಜೆಗಾಗಿ ರಾಯರ ಮಠ ಹಾಗೂ ಉತ್ತರಾದಿ ಮಠದವರ ನಡುವೆ ಭಿನ್ನಮತವಿದೆ. ಈ ವಿವಾದ ಈಗ ಸುಪ್ರೀಂ ಕೋರ್ಟ್‌ನಲ್ಲಿದ್ದು ಆರಾಧನೆ ಇರುವ ಕಾರಣ ಮಧ್ಯಂತರ ತೀರ್ಪು ನೀಡಿದೆ.

‘ಮೊದಲ ಒಂದೂವರೆ ದಿನ ಆರಾಧನೆ ನಡೆಸಲು ನಮಗೆ ಅವಕಾಶ ಲಭಿಸಿದೆ. ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಂಡಿದ್ದೇವೆ. ಆರಾಧನಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ರಾಯರ ಮಠದ ಪ್ರಮುಖರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT