ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಪೊಲೀಸರ ಅಮಾನತು

Published 21 ಫೆಬ್ರುವರಿ 2024, 6:54 IST
Last Updated 21 ಫೆಬ್ರುವರಿ 2024, 6:54 IST
ಅಕ್ಷರ ಗಾತ್ರ

ಕೊಪ್ಪಳ: ಕೆಲವರು ಅಪರಾಧ ಚಟುವಟಿಕೆಗೆ ಬಳಸಿದ್ದ ಹಣವನ್ನು ವೈಯಕ್ತಿಕಕ್ಕೆ ಬಳಕೆ ಮಾಡಿಕೊಂಡ ಆರೋಪದ ಮೇಲೆ ಜಿಲ್ಲೆಯ ಯಲಬುರ್ಗಾ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಕೆಲವರು ಜೂಜಾಟವಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಣ ವಶಕ್ಕೆ ಪಡೆದುಕೊಂಡಿದ್ದರು. ಈ ಹಣದ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳದೆ ವೈಯಕ್ತಿಕಕ್ಕೆ ಬಳಸಿಕೊಂಡಿದ್ದರಿಂದ ಅಮಾನತಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂವರನ್ನು ಅಮಾನತು ಮಾಡಿರುವ ವಿಷಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಖಚಿತಪಡಿಸಿದ್ದಾರೆ.

ಈ ಕುರಿತು ಯಲಬುರ್ಗಾದ ಪೊಲೀಸರೊಬ್ಬರನ್ನು ಪ್ರಶ್ನಿಸಿದಾಗ ’ಅಮಾನತಿನ ಘಟನೆಗಳು ನಡೆದಿಲ್ಲ. ಷೋಕಾಸ್‌ ನೋಟಿಸ್‌ ಮಾತ್ರ ನೀಡಲಾಗಿದೆ. ನಿಮಗೆಲ್ಲವೂ ವಿಷಯ ಗೊತ್ತಿರುತ್ತದೆ ಬಿಡಿ’ ಎಂದು ಜಾರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT