ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾವರಗೇರಾ : ಕನಕದಾಸ ಜಯಂತಿ ಆಚರಣೆ

ಹಾಲುಮತ ಸಮಾಜದಿಂದ ವಿಜೃಂಭಣೆಯ ಮೆರವಣಿಗೆ
Published 17 ಡಿಸೆಂಬರ್ 2023, 16:12 IST
Last Updated 17 ಡಿಸೆಂಬರ್ 2023, 16:12 IST
ಅಕ್ಷರ ಗಾತ್ರ

ತಾವರಗೇರಾ: ಸ್ಥಳೀಯ ಹಾಲುಮತ ಸಮಾಜದ ವತಿಯಿಂದ ಭಾನುವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಕನಕದಾಸ ವೃತ್ತದ ಕನಕದಾಸರ ಪ್ರತಿಮೆಗೆ ಹೂ ಮಾಲೆ ಹಾಕುವ ಮೂಲಕ ಚಾಲನೆ ನೀಡಿದರು.

ಹಾಲುಮತ ಸಮಾಜದ ಮಹಿಳೆಯರ ಕುಂಭ, ಕಳಸ ಮತ್ತು ಭಜನೆ, ಡೊಳ್ಳು ವಾದ್ಯಗಳೊಂದಿಗೆ ಕನಕದಾಸ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸ್ತಬ್ಧ ಚಿತ್ರ ಮೆರವಣಿಗೆ ಮತ್ತು ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ತಾವರಗೇರಾ ಪಟ್ಟಣದಲ್ಲಿ ಭಾನುವಾರಹಾಲುಮತ ಸಮಾಜದ ವತಿಯಿಂದ ನಡೆದ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಕನಕದಾಸ ವೃತ್ತದ ಕನಕದಾಸರ ಪ್ರತಿಮೆಗೆ ಹೂ ಮಾಲೆ ಹಾಕುವ ಮೂಲಕ ಚಾಲನೆ ನೀಡಿದರು.
ತಾವರಗೇರಾ ಪಟ್ಟಣದಲ್ಲಿ ಭಾನುವಾರಹಾಲುಮತ ಸಮಾಜದ ವತಿಯಿಂದ ನಡೆದ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಕನಕದಾಸ ವೃತ್ತದ ಕನಕದಾಸರ ಪ್ರತಿಮೆಗೆ ಹೂ ಮಾಲೆ ಹಾಕುವ ಮೂಲಕ ಚಾಲನೆ ನೀಡಿದರು.

ವೃತ್ತದಲ್ಲಿ ಕನಕದಾಸ ಪ್ರತಿಮೆಗೆ ಹೂ, ದೀಪಾಲಂಕಾರದಿಂದ ಶೃಂಗಾರ ಮಾಡಲಾಗಿತ್ತು.
ಮುಖಂಡ ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಜಿಪಂ ಮಾಜಿ ಸದಸ್ಯ ಕೆ.ಮಹೇಶ , ದೊಡ್ಡಬಸವ ಪಾಟೀಲ್ ಬಯ್ಯಾಪೂರ, ಹಾಲುಮತ ಸಮಾಜದ ಪ್ರಮುಖರು ಮತ್ತು ವಿವಿಧ ಸಮಾಜದ ಹಿರಿಯರು ಮಹಿಳೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT