ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮರ್ಥ ಅಭ್ಯರ್ಥಿ ಅಮರನಾಥ ಪಾಟೀಲ್‌ರಿಗೆ ಮತ್ತೊಮ್ಮ ಅವಕಾಶ ನೀಡಿ: ಶಿವರಾಮೇಗೌಡ

Published 29 ಮೇ 2024, 15:46 IST
Last Updated 29 ಮೇ 2024, 15:46 IST
ಅಕ್ಷರ ಗಾತ್ರ

ಕಾರಟಗಿ: ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಸದಾ ಸ್ಪಂದಿಸುವ, ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದು, ಸಮಸ್ಯೆಗಳ ನಿವಾರಣೆಗೆ ಕಟಿಬದ್ದರಾಗಿ ಕೆಲಸ ಮಾಡುವ ಅಮರನಾಥ ಪಾಟೀಲ ಸುಶಿಕ್ಷಿತ ಹಾಗೂ ಹೋರಾಟಗಾರರು. ಅವರಿಗೆ ಮತ್ತೊಂದು ಅವಕಾಶ ನೀಡಿ, ಗೆಲ್ಲಿಸಬೇಕಾದ ಅವಶ್ಯಕತೆ ಇದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದರು.

ಪಟ್ಟಣದ ಮಾಜಿ ಶಾಸಕ ಬಸವರಾಜ ದಢೇಸೂಗೂರು ಕಚೇರಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಭ್ಯರ್ಥಿ ಅಮರನಾಥ ಪಾಟೀಲ ಪರ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ಮರೆತಿದೆ. ಕೇವಲ ಗ್ಯಾರಂಟಿ ಹೆಸರಿನಲ್ಲಿ ಭಾಷಣ ಮಾಡುತ್ತಾರೆ. ಸರ್ಕಾರ ನಡೆಸುವವರಿಗೆ ತಕ್ಕ ಪಾಠ ಕಲಿಸಿ. ಪದವೀಧರ ಮತದಾರರು ತಮ್ಮ ಪ್ರಜ್ಞೆ ಮೆರೆಯಬೇಕಿದೆ ಎಂದರು.

ಅಮರನಾಥ ಪಾಟೀಲ ಅವರು 2012ರಿಂದ 2018ರ ಅವಧಿಯಲ್ಲಿ ಗಮನ ಸೆಳೆಯುವಂತೆ ಕೆಲಸ ಮಾಡಿದ್ದಾರೆ. ಪಕ್ಷದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಈ ಭಾಗದ ವಾಣಿಜ್ಯೋದ್ಯಮ, ಔದ್ಯೋಗೀಕರಣವಾಗಲು, ಸಮಸ್ಯೆಗಳ ನಿವಾರಣೆಯಾಗಲು ಮತ್ತೊಮ್ಮೆ ಅವರು ಗೆಲ್ಲಬೇಕಿದೆ ಎಂದರು.

ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು, ಯುವ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೇಲ್ಮನೆಯಲ್ಲಿ ಧ್ವನಿ ಎತ್ತಿ ಪರಿಹಾರ ಕಲ್ಪಿಸುವ ಸಾಮರ್ಥ್ಯ ಅಮರನಾಥ ಪಾಟೀಲರಗಿದೆ. ಅನುಭವಿ, ಸುಶಿಕ್ಷಿತ, ಕ್ರಿಯಾಶೀಲ ವ್ಯಕ್ತಿತ್ವದ ಪಾಟೀಲ್ ಗೆಲುವು ಅಗತ್ಯವಾಗಿದೆ ಎಂದರು.

ಬಿಜೆಪಿ ಮುಖಂಡರಾದ ನಾಗರಾಜ್ ಬಿಲ್ಗಾರ್, ಅಮರೇಶ್ ಕುಳಗಿ, ಗುರುಸಿದ್ದಪ್ಪ ಯರಕಲ್, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಉಮೇಶ ಸಜ್ಜನ್, ಪುರಸಭೆ ಸದಸ್ಯ ಬಸವರಾಜ್ ಕೊಪ್ಪದ, ಶಿವಶರಣಪ್ಪ ಶಿವಪೂಜಿ, ವಿರುಪಾಕ್ಷಿ ತಿಮ್ಮಾಪುರ, ದೇವರಾಜ್ ಜೂರಟಗಿ, ಹನುಮಂತಪ್ಪ ಬೇವಿನಾಳ, ಸುರೇಶ ಬೆನ್ನೂರು, ಅಯ್ಯಪ್ಪ ಬಂಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT