ಮಂಗಳವಾರ, ಜನವರಿ 26, 2021
16 °C
ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಸಲಹೆ

ಶೈಕ್ಷಣಿಕ ಭವಿಷ್ಯಕ್ಕೆ ಶಿಕ್ಷಕರ ಮಾರ್ಗದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ‘ಸತತ ಅಧ್ಯಯನ ಮತ್ತು ಶಿಕ್ಷಕರ ಮಾರ್ಗದರ್ಶನದೊಂದಿಗೆ ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಶಶೀಲ್ ನಮೋಶಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾಗಮ, ಹತ್ತನೇ ತರಗತಿಯ ಪಾಠಗಳು ಸೇರಿದಂತೆ ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ, ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

‘ಕೋವಿಡ್‌ ಕಾರಣಕ್ಕೆ ಇಲ್ಲಿಯವರೆಗೂ ಶೈಕ್ಷಣಿಕ ಪರಿಸರದಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಯಾವ ಆತಂಕ ಇಲ್ಲದೇ ರ್ಧೈಯವಾಗಿ ಶಾಲೆಗೆ ಬರಬೇಕು. ನಿಗದಿತ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಮರೆಯಬಾರದು. ಅಲ್ಲದೆ ಕೊರೊನಾ ಹೊಸ ಅಲೆಯ ಬಗ್ಗೆಯೂ ಎಚ್ಚರವಿರಲಿ’
ಎಂದರು.

ಶಾಲೆಯಲ್ಲಿ ಎಸ್‌ಒಪಿ ನಿಯಮಗಳನ್ನು ಚಾಚೂ ತಪ್ಪದೇ ಅನುಸರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕರ ಸಂಘದ ಯಮನಪ್ಪ ಚೂರಿ, ರಾಯಪ್ಪ ಹೂಗಾರ, ದೈಹಿಕ ಶಿಕ್ಷಣ ಶಿಕ್ಷಕ ನಾಗಪ್ಪ ಬೆಳಿಯಪ್ಪನವರ, ಸರ್ಕಾರಿ ನೌಕರ ಸಂಘದ ನಿರ್ದೇಶಕ ಜಗದೀಶ ಸೂಡಿ, ಪ್ರಭಾರ ಮುಖ್ಯಶಿಕ್ಷಕ ಶಿವಯೋಗಪ್ಪ, ಶಿಕ್ಷಕರಾದ ಡಾ.ಶರಣಪ್ಪ ನಿಡಶೇಸಿ, ಸುಭಾಸ ನಿಡಸನೂರ, ರೇವಣಸಿದ್ದಪ್ಪ ಅಂಗಡಿ, ಶ್ರೀಮತಿ ಬಿ.ಕೆ. ವಾರದ, ಅಕ್ಕಮಹಾದೇವಿ. ನಾಗರತ್ನ, ವಿಜಯಲಕ್ಷ್ಮಿ, ನಾಗರಾಜ ಯಲಿಗಾರ, ಮಾರುತಿ ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.