ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣಮಾಸದ ಭಜನಾ ಮಂಗಲೋತ್ಸವ

Last Updated 8 ಸೆಪ್ಟೆಂಬರ್ 2021, 11:56 IST
ಅಕ್ಷರ ಗಾತ್ರ

ಕುಕನೂರು: ‘ನಾನು, ನನ್ನದು ಎನ್ನುವುದು ಸರಿಯಲ್ಲ. ಎಲ್ಲವನ್ನು ಇಲ್ಲಿಯೇ ಸಂಪಾದನೆ ಮಾಡಿದ್ದೇವೆ. ಹೋಗುವಾಗ ಇಲ್ಲಿಯೇ ಬಿಟ್ಟು ಹೋಗುತ್ತೇವೆ. ಸಮಾಜದ ಶ್ರೇಯಸ್ಸಿಗಾಗಿ ಮಾಡುವ ಒಳ್ಳೆಯ ಕೆಲಸಗಳಷ್ಟೆ ಶಾಶ್ವತವಾಗಿ ಉಳಿಯುತ್ತವೆ’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಯಲ್ಲಪ್ಪ ಕಲ್ಮನಿ ಹೇಳಿದರು.

ಇಲ್ಲಿನ ಅಂಬೇಡ್ಕರ್ ನಗರದ ದುರ್ಗಾದೇವಿ ದೇವಸ್ಥಾನದ ಶ್ರಾವಣಮಾಸದ ಭಜನಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಜಾತಿ, ಮತ, ಧರ್ಮಗಳನ್ನು ಬಿಡಬೇಕು. ಮಾನವೀಯತೆ ಬೆಳೆಸಿಕೊಳ್ಳಬೇಕು. ಭಾರತ ಸರ್ವ ಧರ್ಮಗಳ ತವರೂರು. ಮಾತ್ರವಲ್ಲ ಐಕ್ಯತೆಗೆ ಹೆಸರಾಗಿದೆ. ಪರಸ್ಪರ ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಬೇಕು‘ ಎಂದರು.

ಎಲ್ಲರೂ ಪರಸ್ಪರ ಸಹಕಾರದಿಂದ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಹಬ್ಬ, ಆಚರಣೆಗಳು ಜನರಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶ ಹೊಂದಿವೆ. ಎಲ್ಲ ಧರ್ಮಗಳ ಹಬ್ಬದ ಆಚರಣೆಗಳಲ್ಲಿ ಸರ್ವರೂ ಭಾಗವಹಿಸಬೇಕು’ ಎಂದರು.

ದುರ್ಗಾದೇವಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಲಕ್ಷ್ಮಣ್ ಮಂಡಲಗಿರಿ ಮಾತನಾಡಿ, ‘ಎಲ್ಲ ಧರ್ಮಗಳ ಸಾರ ಮಾನವೀಯತೆ. ಪರಸ್ಪರ ಹೊಂದಾಣಿಕೆಯಿಂದ ಜೀವನ ಮಾಡುವುದನ್ನು ಬೋಧಿಸುತ್ತವೆ. ಜಾತಿ, ಧರ್ಮಗಳ ತಾರತಮ್ಯ ಹೋಗಲಾಡಿಸುವ ಮೂಲಕ ಸಾಮರಸ್ಯ ಕಾಪಾಡಬೇಕು‘ ಎಂದರು.

ಹಾರ್ಮೋನಿಯಂ ಮಾಸ್ತರಾದ ಮೈಲಾರಪ್ಪ ಮಾಡವಾಳ, ಶಂಕ್ರಪ್ಪ ಕಲ್ಮನಿ, ಹನುಮಂತಪ್ಪ ಘಾಟಿ, ಮೈಲಾರಪ್ಪ ಸಾಲ್ಮನಿ, ರಾಮಣ್ಣ ಬಂಕದಮನಿ, ಹನಮಂತಪ್ಪ ಡಿ. ಚಲವಾದಿ, ಯಲ್ಲಪ್ಪ ಚಲವಾದಿ ಹನಮಂತಪ್ಪ ಜಕ್ಕಲಿ, ಜುಂಜಪ್ಪ ಸಾಲ್ಮನಿ, ರಮೇಶ್ ಮಾಳೆಕೊಪ್ಪ, ಶರಣಪ್ಪ ಘಾಟಿ, ಶರಣಪ್ಪ ಕಾಳಿ, ಯಲ್ಲಪ್ಪ ಕಲ್ಮನಿ, ಲಕ್ಷ್ಮಣ ಸಾಲ್ಮನಿ, ಈರಪ್ಪ ಕಾಳಿ, ರಾಜೇಶ್ ಕತ್ತರಕಿ, ಮುದಿಯಪ್ಪ ಕಾಳಿ, ಬಸವರಾಜ ಶಲುಡಿ, ಯಗ್ಗಪ್ಪ ಸಾಲ್ಮನಿ, ಈರಪ್ಪ ಬಂಕದಮನಿ, ನಿಂಗಪ್ಪ ಘಾಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT