ಶುಕ್ರವಾರ, ಅಕ್ಟೋಬರ್ 7, 2022
24 °C

ಗಂಗಾವತಿ ತಾಲೂಕ್ಕಿನಲ್ಲಿ ಒಂದೇ ದಿನ ಮೂರು ಕೋವಿಡ್-19 ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗಂಗಾವತಿ: ಗಂಗಾವತಿ ತಾಲ್ಲೂಕಿನಲ್ಲಿ ಒಂದೇ ದಿನ ಮೂರು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿವೆ.

ಗಂಗಾವತಿ ವಕೀಲಗೇಟ್ ಬಳಿಯ ನಿವಾಸಿ 3 ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಜೂ.9 ರಂದು ಮುಂಬೈನಿಂದ ಪಾಲಕರೊಂದಿಗೆ ಮಗು ಆಗಮಿಸಿತ್ತು. 

ಅನಾರೋಗ್ಯದ ಹಿನ್ನೆಲೆಯಲ್ಲಿ ಉಪವಿಭಾಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾಗ ಕೋವಿಡ್-19 ಇರುವುದು ಪತ್ತೆಯಾಗಿದೆ. 
ತಂದೆ, ತಾಯಿಯ ಗಂಟಲು ದ್ರವವನ್ನು ಪಡೆದಿರುವ ವೈದ್ಯರ ತಂಡ ಪರೀಕ್ಷೆಗೆ ರವಾನಿಸಿದೆ. ಮಗುವನ್ನು ಕೊಪ್ಪಳದ ಐಸೋಲೇಶನ್ ವಾರ್ಡಗೆ ಶಿಫ್ಟ್ ಮಾಡಲಾಗಿದೆ. ನಿವಾಸದ ಸ್ಥಳಕ್ಕೆ ದೌಡಾಯಿಸಿದ ನಗರಸಭೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.

ತಾಲ್ಲೂಕಿನ ಮರಳಿಯಲ್ಲಿಯೂ ದಂಪತಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 53 ವರ್ಷದ ಪತಿ, 45 ವರ್ಷದ ಪತ್ನಿಗೆ ಕೊರೊನಾ ಸೋಂಕು ತಗುಲಿದೆ.

ಬಳ್ಳಾರಿಯ ಜಿಂದಾಲ್‌ನಲ್ಲಿ ಕೆಲಸ ಮಾಡುವ ಪುತ್ರನಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತಾಲ್ಲೂಕಾಡಳಿತದ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ. 

ನಗರದ ವಕೀಲ್ ಗೇಟ್ ಮತ್ತು ಮರಳಿ ಸೀಲ್‌ಡೌನ್‌ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು