ಅಳವಂಡಿ: ಸಮೀಪದ ಹಿರೇಸಿಂದೋಗಿಯ ಪುನರ್ ವಸತಿ ಕೇಂದ್ರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.

ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಹಿರೇಹಳ್ಳದ ಹಿನ್ನೀರಿಂದ ಮುಳುಗಡೆಯಾದ ಪ್ರದೇಶದಲ್ಲಿದ್ದ ಇಲ್ಲಿನ ಸುಮಾರು 328 ಕುಟುಂಬಗಳಿಗೆ ಹಲಗೇರಿ ರಸ್ತೆಯ ಪುನರ್ ವಸತಿ ಕೇಂದ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 200 ಕುಟುಂಬಗಳು ಸದ್ಯ ಆಶ್ರಯ ಪಡೆದಿವೆ.

2009-10 ರಲ್ಲಿ ಈ ಪ್ರದೇಶ ಮುಳುಗಡೆಯಾಗಿದ್ದರಿಂದ ಅಲ್ಲಿನ ಜನರನ್ನು ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಸಂತ್ರಸ್ತರ ವಸತಿಯ ನಿವೇಶನಗಳಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ.

ಗ್ರಾ.ಪಂ.ನಿರ್ಲಕ್ಷ್ಯ:

ಮನೆಗಳ ಸುತ್ತ ಮುತ್ತ ಜಾಲಿ ಗಿಡಗಂಟಿಗಳು ಬೆಳೆದಿವೆ. ಚರಂಡಿಗಳಲ್ಲಿ ಹೂಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚುತ್ತಿದೆ. ಹಾಗಾಗಿ ಇಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಆರಂಭವಾಗಿದೆ.

‘ಪುನರ್ ವಸತಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದ ಕಾರಣ ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ಮರೀಚಿಕೆಯಾಗಿದೆ. ಜೆಜೆಎಂ ಯೋಜನೆ ಮೂಲಕ ನಳ ಅಳವಡಿಸಿದರೂ ಅದರಲ್ಲಿ ಒಂದು ಹನಿ ನೀರು ಸಹ ಬಂದಿಲ್ಲ. ಇಲ್ಲಿನ ಪ್ರತಿ ಓಣಿಯ ರಸ್ತೆಗಳು ಸಹ ಸರಿಯಾಗಿಲ್ಲ. ಸ್ವಚ್ಛತೆ ಕೈಗೊಳ್ಳುವಂತೆ ಮನವಿ ಮಾಡಿದರೂ ಪಿಡಿಒ ಹಾಗೂ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡಿಲ್ಲ’ ಎಂದು ನಿವಾಸಿ ಹುಲಿಗೆಮ್ಮ ದೂರಿದರು.

‘ಪುನರ್ ವಸತಿ ಕೇಂದ್ರದಲ್ಲಿ ವಾಸಿಸುವ ಜನರಿಗೆ ಮೂಲ ಸೌಕರ್ಯ ಹಾಗೂ ಸ್ವಚ್ಛತೆ ಕಾಪಾಡಲು ಇಲ್ಲಿನ ಸ್ಥಳೀಯ ಆಡಳಿತ ಮುಂದಾಗಬೇಕು’ ಎಂದು ಇಲ್ಲಿನ ನಿವಾಸಿ ಗವಿಸಿದ್ದಪ್ಪ ಒತ್ತಾಯಿಸಿದರು.

ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕರ ಹಾಗೂ ಸಂಸದರ ಅನುದಾನದಲ್ಲಿ ನಿರ್ಮಾಣ ಮಾಡಬೇಕಿದೆ. ಈ ಕುರಿತು ಮನವಿ ಮಾಡಲಾಗಿದೆ. ಪುನರ್ ವಸತಿ ಕೇಂದ್ರವನ್ನು ಶೀಘ್ರದಲ್ಲೇ ಸ್ವಚ್ಛತೆ ಕೈಗೊಳ್ಳಲಾಗುವುದು.
ಪ್ರಕಾಶ್ ಪಿಡಿಒ ಹಿರೇಸಿಂದೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.