ಕುಕನೂರು: ‘ಹಿಂದಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲ್ಲೂಕಿನ ಆಡೂರು ಗ್ರಾಮದಲ್ಲಿ ಸೋಮವಾರ ಮಾಜಿ ಶಾಸಕ ದಿವಂಗತ ವೀರಭದ್ರಪ್ಪ ಶಿರೂರು ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಪ್ರಾಮಾಣಿಕ ಹಾಗೂ ಮುತ್ಸದ್ದಿ ರಾಜಕಾರಣಿಗಳಾದ ವೀರಭದ್ರಪ್ಪ ಶಿರೂರ ಅವರು ನಾಡು ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಅಂತಹ ಮಹಾನ್ ನಾಯಕ ನಮ್ಮ ಕ್ಷೇತ್ರದವರು ಎನ್ನುವುದು ನಮ್ಮ ಸುದೈವ. ಈಗಿನ ರಾಜಕಾರಣ ಕೇವಲ ಭ್ರಷ್ಟಾಚಾರ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶೈಕ್ಷಣಿಕ ಹಾಗೂ ಹರಿಜನರ ಉದ್ದಾರಕ್ಕಾಗಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ರಾಜಕಾರಣದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಕೇವಲ ಪುತ್ತಳಿ ಅನಾವರಣಗೊಳಿಸಿದರೆ ಸಾಲದು, ಅವರ ಆದರ್ಶ ವಿಚಾರಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಕ್ಕೆ ಶೋಭೆ ಬರುತ್ತದೆ’ ಎಂದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ‘ಮಾಜಿ ಶಾಸಕರ ವೀರಭದ್ರಪ್ಪ ಶಿರೂರು ಅವರು ಸ್ವಾತಂತ್ರ್ಯ ಹೋರಾಟಗಾರ, ಸಹಕಾರ ಸಂಘಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು. ರೈತರ ಹಾಗೂ ಹರಿಜನರ ಉದ್ದಾರಕ್ಕೆ ಹಗಲಿರುಳು ಪ್ರಾಮಾಣಿಕ ಸೇವೆ ಸಲ್ಲಿಸಿದ ಮಹನೀಯ’ ಎಂದು ಬಣ್ಣಿಸಿದರು.

‘ಮಹಾನ್ ನಾಯಕರ ಪುತ್ಥಳಿ ಅನಾವರಣ ಮಾಡುತ್ತಿರುವ ಯುವ ಮುಖಂಡ ಹನುಮಂತರಡ್ಡಿ ಶಿರೂರು ಅವರ ಕಾರ್ಯ ಪ್ರಸಂಶನೀಯ’ ಎಂದರು.

ಸಾಹಿತಿ ಬಿ.ವಿ ಶಿರೂರು ಮಾತನಾಡಿ, ‘ವೀರಭದ್ರಪ್ಪ ಶಿರೂರು ಅವರು ನನ್ನ ತಂದೆ ಎನ್ನುವುದೇ ನನ್ನ ದೊಡ್ಡ ಪುಣ್ಯ. ಅಂತಹ ಪ್ರಮಾಣಿಕ ಶಾಸಕರನ್ನು ಯಲಬುರ್ಗಾ ಕ್ಷೇತ್ರ ಕಂಡಿದ್ದು ಪುಣ್ಯ. ಅಂತಹ ಮಹಾನ್ ನಾಯಕನನ್ನು ನೆನೆದು ಪುತ್ಥಳಿ ಅನಾವರಣ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.

ಯಲಬುರ್ಗಾ ಮುರುಡಿಮಠದ ಬಸವಸ್ತಿ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ, ಸಾಹಿತಿ ಕೆ.ಬಿ ಬ್ಯಾಳಿ, ಯುವ ಮುಖಂಡ ಹನುಮಂತರಡ್ಡಿ ಶಿರೂರು, ಶಿವಕುಮಾರ ನಾಗಲಾಪುರಮಠ, ಕರಿಬಸಪ್ಪ ನಿಡುಗುಂದಿ, ಬಸವರಾಜ ಗೌರಾ, ಶಂಬಣ್ಣ ಜೋಳದ, ಸಂಗಮೇಶ್ ಗುತ್ತಿ, ಪ್ರಭು ಮುತ್ತಾಳ, ವೀರೇಶ್ ನಾಗೋಜಿ, ಶರಣಪ್ಪ ಹೊಸಮನಿ, ಬಸವರಾಜ್ ಮುತ್ತಾಳ, ಅಶೋಕ್ ಮುತ್ತಾಳ, ಶರಣರೆಡ್ಡಿ ವಕ್ಕಳದ ಇದ್ದರು.

ಜಸ್ಟ್ ವೇಟ್ ಅಂಡ್ ಸಿ

ಮಂತ್ರಿ ಯಾರಾದರೂ ಆಗಬಹುದು. ಆದರೆ ಒಬ್ಬ ಒಳ್ಳೆಯ ಶಾಸಕನಾಗಿ ಜನಸೇವೆ ಮಾಡುವುದು ಮೊದಲ ಕಾರ್ಯವಾಗಬೇಕು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ತಾಲ್ಲೂಕಿನ ಆಡೂರು ಗ್ರಾಮದಲ್ಲಿ ಮಾಜಿ ಶಾಸಕ ದಿವಂಗತ ವೀರಭದ್ರಪ್ಪ ಶಿರೂರು ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು ನನಗೆ ಮಂತ್ರಿ ಪದವಿ ಸಿಗುವುದು ಬಹುತೇಕ ಖಚಿತ. ಜಸ್ಟ್ ವೇಟ್ ಅಂಡ್ ಸಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.