ಹಿಂದೆಯೇ ರಸ್ತೆಗೆ ಮೆಟ್ಲಿಂಗ್ ಮಾಡಲಾಗಿತ್ತು. ಬಹಳ ವರ್ಷಗಳ ನಂತರ ಕಿತ್ತು ಹೊಗಿದೆ. ಈಗ ಕೆಆರ್‌ಡಿಎಲ್‌ದವರೇ ರಸ್ತೆ ಚರಂಡಿ ನಿರ್ಮಿಸುತ್ತಿದ್ದಾರೆ.
–ಗಂಗಾಧರಸ್ವಾಮಿ ಹಿರೇಮಠ, ಲೇಔಟ್ ಮಾಲೀಕ
ಹೆಸರಿಗೆ ಮಾತ್ರ ಇದು ಬಡಾವಣೆ ಒಂದು ಬುಟ್ಟಿ ಕಲ್ಲು ಸಹ ಹಾಕಿಲ್ಲ. ಆದರೆ ಸರ್ಕಾರದ ಖರ್ಚಿನಲ್ಲಿ ರಾಜಕೀಯ ವ್ಯಕ್ತಿಗಳ ಮನೆವರೆಗೆ ರಸ್ತೆ ನಿರ್ಮಿಸಲು ಅನುದಾನ ಬಿಡುಗಡೆಗೆ ಮುಂದಾಗಿರುವುದು ಸರಿಯಲ್ಲ.
–ಹನುಮಗೌಡ ಪಾಟೀಲ, ನಿವಾಸಿ
ಮಾಲೀಕರು ಲೇಔಟ್ ಅಭಿವೃದ್ಡಿಪಡಿಸಹುದಾಗಿತ್ತು. ಆದರೆ ಈಗ ಅಲ್ಲೆಲ್ಲ ಮನೆಗಳಾಗಿವೆ. ಹಾಗಾಗಿ ರಸ್ತೆ ಚರಂಡಿ ನಿರ್ಮಿಸಲು ಸೂಚಿಸಲಾಗಿದೆ. ಮುಂದೆ ಕೆಕೆಆರ್‌ಡಿಬಿಯಲ್ಲಿ ಈ ಕೆಲಸ ಸೇರಿಸಲಾಗುತ್ತದೆ.
–ದೊಡ್ಡನಗೌಡ ಪಾಟೀಲ, ಶಾಸಕ
ಯಾವುದೇ ಏಜೆನ್ಸಿ ಕೆಲಸ ಮಾಡುವುದಿದ್ದರೂ ಪುರಸಭೆಗೆ ಮಾಹಿತಿ ನೀಡಬೇಕು. ಆದರೆ ಅಂಥ ಪರಿಪಾಠವೇ ಇಲ್ಲಿಲ್ಲ. ಸಂಬಂಧಿಸಿದ ಏಜೆನ್ಸಿಗಳಿಗೆ ನೋಟಿಸ್ ನೀಡಲಾಗಿದೆ.