ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಬುರ್ಗಾ | ಅಪಘಾತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

Published 18 ಮೇ 2024, 13:52 IST
Last Updated 18 ಮೇ 2024, 13:52 IST
ಅಕ್ಷರ ಗಾತ್ರ

ಯಲಬುರ್ಗಾ: ಮುನಿರಾಬಾದ್‌ ಬಳಿಯ ಹುಲಗಿ ಹತ್ತಿರದ ಹೊಸಳ್ಳಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ಶಿವಪ್ಪ ಹನಮಪ್ಪ ಹೊಸ್ಮನಿ ಎಂಬವರು ತಮ್ಮ ಟ್ರ್ಯಾಕ್ಟರ್‌ನಲ್ಲಿ ಗ್ರಾಮದ ಕೆಲ ಪರಿಚಯಸ್ಥರು ಮತ್ತು ತಿಮ್ಮಾಪುರದ ತಮ್ಮ ಸಂಬಂಧಿಕರನ್ನು ಕರೆದುಕೊಂಡು ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ಮರಳಿ ಸ್ವಗ್ರಾಮಕ್ಕೆ ಬರುವಾಗ ಅವಘಡ ಸಂಭವಿಸಿತ್ತು.

ಕರಮುಡಿ ಗ್ರಾಮದ ದುರಗವ್ವ ಹನಮಪ್ಪ ಹೊಸ್ಮನಿ(50), ಬಸವರಾಜ ಶಿವಪುತ್ರಪ್ಪ ದೊಡ್ಮನಿ(22) ತೇಜಸ್(ದೇಶಿಮುತ್ತಪ್ಪ) ಛಲವಾದಿ(20) ಹಾಗೂ ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದ ರಾಮಪ್ಪ ಮರಿಯಪ್ಪ ಸೊಂಪೂರ(58) ಮೃತರಾಗಿದ್ದಾರೆ.

ಕರಿಯಪ್ಪ ಹೊಸ್ಮನಿ, ಶರಣಪ್ಪ ಹೊಸ್ಮನಿ, ಲಕ್ಷ್ಮೀ ದೊಡ್ಮನಿ, ವೀರೇಶ, ಶ್ರೀರಾಮ, ಶಿವರಾಜ ಹೊಸಮನಿ, ರೇಣುಕಾ ಪೂಜಾರಿ, ರಮೇಶ ಹೊಸಮನಿ, ಶಿವಪ್ಪ ಹೊಸಮನಿ, ಶಾರದಾ ಹೊಸ್ಮನಿ, ಹುಚ್ಚೀರಪ್ಪ ಹೊಸ್ಮನಿ, ಶಿವರಾಜ ಹೊಸ್ಮನಿ, ರಾಜಾ ದೊಡ್ಮನಿ, ಮೈಲಾರಪ್ಪ ದೊಡ್ಮನಿ, ಶಾಂತಾ ಹೊಸ್ಮನಿ, ಅನಿಲ್ ಹೊಸ್ಮನಿ ಎಂಬುವರು ತೀವ್ರ ಗಾಯಗೊಂಡಿದ್ದರಿಂದ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಮುಡಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ಜರುಗಿತು.

ಭೇಟಿ: ಅಪಘಾತ ನಡೆದ ಸುದ್ದಿ ತಿಳಿದ ಕೆಲ ಹೊತ್ತಿನಲ್ಲಿಯೇ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಹಾಲಪ್ಪ ಆಚಾರ ಹಾಗೂ ಮುಖಂಡ ಬಸವರಾಜ ಕ್ಯಾವಟರ್ ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು. ಹಾಗೆಯೇ ತ್ವರಿತ ಹಾಗೂ ಸರಿಯಾದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸಲಹೆ ನೀಡಿದರು.

ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದಿಂದ ಹಲಗಿಗೆ ಹೋಗಿ ಮರಳಿ ಬರುತ್ತಿದ್ದಾಗ ನಡೆದ ಅಪಘಾತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಮಾಜಿ ಸಚಿವ ಹಾಲಪ್ಪ ಆಚಾರ ಮತ್ತು ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್ ವಿಚಾರಿಸಿದರು
ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದಿಂದ ಹಲಗಿಗೆ ಹೋಗಿ ಮರಳಿ ಬರುತ್ತಿದ್ದಾಗ ನಡೆದ ಅಪಘಾತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಮಾಜಿ ಸಚಿವ ಹಾಲಪ್ಪ ಆಚಾರ ಮತ್ತು ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್ ವಿಚಾರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT