ಯಲಬುರ್ಗಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ಕಾಲೇಜಿಯಿಂದ ವಿವಿಧ ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಸಭೆ ಸೇರಿ ಅನೇಕರು ಮಾತನಾಡಿದರು.

ಸಂಟನೆಯ ಮುಖಂಡ ಪ್ರಶಾಂತ ನಡೂಲಮನಿ ಮಾತನಾಡಿ, ‘ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕು. ಅವರ ಸೇವೆಯನ್ನು ಕಾಯಂಗೊಳಿಸಿ ನಿರಂತರವಾಗಿ ತರಗತಿಗಳು ನಡೆಯುವಂತೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿನಿ ಪೂಜಾ ಮಾತನಾಡಿ, ‘ಒಂದೂವರೆ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಆದರೆ ಯಾವೊಂದು ವಿಷಯದ ಬೋಧನೆಯಾಗಿಲ್ಲ. ಕೇವಲ ಒಂದೆರಡು ವಿಷಯಗಳು ಮಾತ್ರ ಎರಡು ಅಧ್ಯಾಯಗಳು ಮಾತ್ರ ಪಾಠವಾಗಿವೆ. ಸರ್ಕಾರ ಕೂಡಲೇ ಉಪನ್ಯಾಸಕರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

ಎಬಿವಿಪಿ ಕಾರ್ಯಕರ್ತರಾದ ವೀರೇಶ, ಮುತ್ತಪ್ಪ, ವಿಜಯಕುಮಾರ, ಭೀಮಪ್ಪ, ಕಲ್ಲೇಶ, ಪುನೀತ, ಅನಿಲಕುಮಾರ್, ರಾಜು, ಸ್ನೇಹ, ಕಾವ್ಯ ಸೇರಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.