ಶಿವಮೊಗ್ಗ: ರಾಜ್ಯದಲ್ಲಿ ಹಿಂದೆ ಸ್ಥಾಪಿಸಿದ್ದ 18 ಸಾವಿರ ಶುದ್ಧ ನೀರಿನ ಘಟಕಗಳ ಸ್ಥಿತಿಗತಿ, ಭ್ರಷ್ಟಾಚಾರ ಆರೋಪಗಳ ಕುರಿತುವರದಿ ನೀಡಲು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗ ಪತ್ರಿಕಾಗೋಷ್ಠಿಯಲ್ಲಿಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾಖಲೆಗಳಲ್ಲಿ ಇರುವಷ್ಟು ಘಟಕಗಳು ಇಲ್ಲ. ಹಿಂದಿನ ಸರ್ಕಾರಕ್ಕೆ ಬೋಗಸ್ ವರದಿ ನೀಡಲಾಗಿದೆ ಎಂಬದೂರುಗಳುಇದೆ.ಸೂಕ್ತ ತನಿಖೆ ನಡೆಸಿ,ವರದಿ ನೀಡುವವರೆಗೂ ಹೊಸ ಘಟಕಗಳ ಸ್ಥಾಪನೆ ಮಾಡುವುದಿಲ್ಲ ಎಂದುಭರವಸೆ ನೀಡಿದರು.

150 ಮಾನವ ದಿನಗಳು ಖಾತ್ರಿ:ಉದ್ಯೋಗ ಖಾತ್ರಿ ಯೋಜನೆ ಅಡಿ ಜಾಬ್ ಕಾರ್ಡ್ ಪಡೆದ ಕಾರ್ಮಿಕರಿಗೆ ಇದುವರೆಗೂ 100 ದಿನಗಳ ಕೆಲಸ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರ 150 ದಿನಗಳಿಗೆ ಹೆಚ್ಚಿಸಿದೆ. ರಾಜ್ಯದಲ್ಲೂ ಆದೇಶ ಪಾಲನೆಗೆ ಸೂಚಿಸಲಾಗಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿಗೆ ₹ 20 ಲಕ್ಷ:

ಘನ ತ್ಯಾಜ್ಯ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರ ₨ 20 ಲಕ್ಷ ಅನುದಾನ ನೀಡುತ್ತಿದೆ. ಈಗಾಗಲೇ 3 ಸಾವಿರ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳ ಸಭೆ ನಡೆಸಲಾಗಿದೆ. ಹಲವು ಗಪಂಚಾಯಿತಿಗಳು ಸೇರಿ ಗುಂಪು ನಿರ್ವಹಣೆ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಾಗಿದೆ.ಅಗತ್ಯವಿರುವ ಜಮೀನು ನೀಡಲಾಗುತ್ತದೆ.6,021 ಗ್ರಾಮ ಪಂಚಾಯಿತಿಗಳಕಟ್ಟಡಗಳ ಮೇಲೆಸೋಲಾರ್ ಘಟಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಸೋಲಾರ್ ಯೋಜನೆಯ ಅನುಷ್ಠಾನಕ್ಕೆ ಸ್ಥಳೀಯರನ್ನು ಒಳಗೊಂಡ ವಿಶೇಷ ಸಮಿತಿ ರಚಿಸಲಾಗಿದೆ ಎಂದು ವಿವರ ನೀಡಿದರು.

ರಸ್ತೆ ದುರಸ್ತಿ, ಅಭಿವೃದ್ಧಿಗೆ ₹1,500 ಕೋಟಿ:

ರಸ್ತೆ, ಕುಡಿಯುವ ನೀರು, ಸೋಲಾರ್ ಅಳವಡಿಕೆ, ಕಸವಿಲೇವಾರಿ, ನರೇಗಾ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು.ಗ್ರಾಮ ಪಂಚಾಯಿತಿಗಳಿಗೆ ಮತ್ತಷ್ಟು ಶಕ್ತಿ ತುಂಬಲಾಗುವುದು.ಮಳೆಗೆ104 ವಿಧಾನಸಭಾ ಕ್ಷೇತ್ರಗಳ ಬಹುತೇಕ ರಸ್ತೆಗಳು ಹಾಳಾಗಿವೆ. ಅವುಗಳ ದುರಸ್ತಿ, ಅಭಿವೃದ್ಧಿಗೆ₹1,500 ಕೋಟಿ ಬಿಡುಗಡೆಯಾಗಿದೆ. ಮೂರು ತಿಂಗಳ ಒಳಗೆ ಎಲ್ಲ ರಸ್ತೆಗಳೂ ಸುಸ್ಥಿತಿಯಲ್ಲಿರಲಿವೆಎಂದರು.

ಶಿವಮೊಗ್ಗ ನಗರದ ಅಭಿವೃದ್ಧಿಗೆ ಆದ್ಯತೆ:

ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿಗೆಶ್ರಮಿಸಲಾಗುತ್ತಿದೆ. ಸ್ಮಾರ್ಟ್ಸಿಟಿ ಕಾಮಗಾರಿಗಳು ವೇಗ ಪಡೆದಿವೆ.ಆಶ್ರಯ ಯೋಜನೆ ಅಡಿ3 ಸಾವಿರ ಮನೆಗಳು ನಿರ್ಮಾಣಕ್ಕೆ ಟೆಂಡರ್ ಕರೆಯಲು ರಾಜೀವ್ ಗಾಂಧಿ ವಸತಿ ನಿಗಮ ಅನುಮತಿ ನೀಡಿದೆ. ನಗರದ ಸರ್ಕಾರಿಶಾಲೆಗಳ ದುರಸ್ತಿ, ಶೌಚಾಲಯ ಕಟ್ಟಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು 84 ಶಾಲೆಗಳಲ್ಲಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಭೂಗತ ಕೇಬಲ್ ಅಳವಡಿಕೆ, ಒಳಚರಂಡಿ ಯೋಜನೆ, ಕುಡಿಯುವ ನೀರಿನ ಯೋಜನೆ ಕೆಲಸಗಳು ನಡೆಯುತ್ತಿವೆ.ದೂಳು ಸಾಮಾನ್ಯವಾಗಿದೆ. ಕಾಮಗಾರಿ ವೇಗವಾಗಿಪೂರ್ಣಗೊಳಿಸುವ ಮೂಲಕಎಲ್ಲ ಸಮಸ್ಯೆಗಳಿಗೂ ಮುಕ್ತಿ ನೀಡಲಾಗುವುದು ಎಂದರು.

ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್,ಪ್ರಧಾನ ಕಾರ್ಯದರ್ಶಿಶಿ.ವಿ.ಸಿದ್ದಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.