ಕೃಷ್ಣರಾಜಪೇಟೆ: ಪ್ರತಿಯೊಬ್ಬರೂ ಐತಿಹಾಸಿಕ ಪ್ರಜ್ಞೆಯನ್ನು ಹೊಂದಿದಾಗ ಮಾತ್ರ ಭವಿಷ್ಯದ ಸುಂದರ ಸಮಾಜದ ನಿರ್ಮಾಣ ಸುಲಭ ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮಿಗೌಡ ತಿಳಿಸಿದರು.

ಪಟ್ಟಣದ ಕಲ್ಪತರು ಪದವಿ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕ ಮತ್ತು ರಾಜ್ಯ ಪತ್ರಗಾರ ಇಲಾಖೆ ಆಶ್ರಯದಲ್ಲಿ ಎರಡು ದಿನಗಳು ನಡೆದ ಹೊಯ್ಸಳ ಕಲೆಗಳ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ಭವ್ಯ ಇತಿಹಾಸದ ಅರಿವು ಮುಂದಿನ ಸಮಾಜ ಸಾಗ ಬೇಕಾದ ಹಾದಿಯ ದಿಕ್ಸೂಚಿಯಂತಿದೆ ಎಂದರು.
ಕಲ್ಪತರು ಪದವಿ ಕಾಲೇಜಿನ ಅಧ್ಯಕ್ಷ ವಿಠಲಾಪುರ ಜಯರಾಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸೋಮ ಶೇಖರ್ ಸಮಾರೋಪ ನುಡಿಗಳಾ ಡಿದರು.

ಬೆಂಗಳೂರಿನ ಇತಿಹಾಸ ಪ್ರಾಧ್ಯಾಪಕ ಡಾ.ಅರುಣಿಯವರು ಹೊಯ್ಸಳ ಶಿಲ್ಪಕಲೆಯ ಚಿತ್ರ ಮತ್ತು ನೃತ್ಯ ಕುರಿತು ವಿಷಯ ಮಂಡಿಸಿದರು.

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶಿ.ಕುಮಾರಸ್ವಾಮಿ, ಮೈಸೂರಿನ ಜೆಎಸ್ಎಸ್ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕ ಹೊನ್ನಶೆಟ್ಟಿ, ಲಯನ್ಸ್ ಕ್ಲಬ್ ಸಂಸ್ಥೆ ಅಧ್ಯಕ್ಷ ಜೆ.ಜಿ.ರಾಜೇಗೌಡ,ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಯುವ ಬರಹಗಾರರ ಬಳಗದ ಅಧ್ಯಕ್ಷ ಶ್ರೀಧರ್ ರಾಯಸಮುದ್ರ, ಪ್ರಾಚಾರ್ಯ ಎಂ.ಬಿ.ಸುರೇಶ್, ಸಾಹಿತಿ ಗಳಾದ ಕೆ.ಜಿ.ನಾಗರಾಜು, ಗೌಡ ನಂಜಪ್ಪ, ಉಪನ್ಯಾಸಕರಾದ ರಾಮಚಂದ್ರು, ಕೃಷ್ಣಪ್ಪ, ಕೆ.ಟಿ.ಚಂದ್ರು, ಎಸ್.ಆರ್. ನಾಗೇಗೌಡ, ಶ್ರೀನಿವಾಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.