ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಬೋರಲಿಂಗೇಗೌಡ ಅವರ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಸುಮಾರು 17 ಕೆ.ಜಿ ತೂಕದ ₹50,000 ಬೆಲೆ ಬಾಳುವ ಗಾಂಜಾ ಬೆಳೆಯನ್ನು ಅಬಕಾರಿ ಪೊಲೀಸರು ಸೋಮವಾರ ವಶಪಡಿಸಿಕೊಂಡರು.

ಮಂಡ್ಯ ಉಪ ಆಯುಕ್ತರ ಕಚೇರಿ ಎಸ್ಐ ನಾಗಭೂಷಣ್ ಹಾಗೂ ಕೆ.ಆರ್.ಪೇಟೆ ಅಬಕಾರಿ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದಲ್ಲಿ ದಾಳಿ ನಡೆಸಿ ಗಾಂಜಾ ಸಮೇತ ಬೋರಲಿಂಗೇಗೌಡನನ್ನು ಬಂಧಿಸಿದರು.

‘ಎನ್ಡಿಪಿಎಸ್ ಅಡಿಯಲ್ಲಿ ಕೆ.ಆರ್. ಪೇಟೆ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಎಸ್ಐ ನಾಗಭೂಷಣ್ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಬೂಕನಕೆರೆ ಹೋಬಳಿ ರಾಜಶ್ವನಿರಕ್ಷಕಿ ಚಂದ್ರಕಲಾ, ಅಬಕಾರಿ ಹೆಡ್ ಕಾನ್ಸ್ಟೇಬಲ್ ಅನಿಲ್ ಕುಮಾರ್, ದಿನೇಶ್, ಎಂ ಎಸ್, ಪೇದೆಗಳಾದ ಗಂಗಾಧರ್ , ಚಂದ್ರಶೇಖರ, ನಾಗಪ್ಪ, ಸಂತೋಷ ಕುಮಾರ್, ಜಮೀರ್, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.