ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದಲೇ ಮತದಾನ: 309 ಮಂದಿಗೆ ಅವಕಾಶ

Published 17 ಏಪ್ರಿಲ್ 2024, 13:41 IST
Last Updated 17 ಏಪ್ರಿಲ್ 2024, 13:41 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಶ್ರೀರಂಗಪಟ್ಟಣ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ಅಂಗ ವೈಕಲ್ಯ ಹೊಂದಿರುವ 309 ಮಂದಿ ಲೋಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಮಾಡಲು ಅರ್ಜಿ ಸಲ್ಲಿಸಿ ಅವಕಾಶ ಪಡೆದಿದ್ದಾರೆ ಎಂದು ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಮನೆಯಿಂದ ಮತದಾನ ಮಾಡಲು 2708 ಮಂದಿ ಅಂಗವಿಕಲರು ಮತ್ತು 85 ವರ್ಷ ಮೇಲ್ಪಟ್ಟ 2380 ಮಂದಿ ಅರ್ಹರಾಗಿದ್ದಾರೆ. ಆದರೆ ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ ಮನೆಯಿಂದ ಮತದಾನ ಮಾಡಲು ನಮೂನೆ 12–ಡಿ ಮೂಲಕ ಹೆಸರು ನೊಂದಾಯಿಸಬೇಕು. ಆದರೆ ವಿಧಾನಸಭಾ ಕ್ಷೇತ್ರದಲ್ಲಿ 309 ಮಂದಿ ಮಾತ್ರ ತಮ್ಮ ಹೆಸರು ನೊಂದಾಯಿಸಿದ್ದಾರೆ. ಈ ಪೈಕಿ ಮಂಗಳವಾರ ಸಂಜೆ ವರೆಗೆ 131 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ. ನಮೂನೆ 12–ಡಿ ಮೂಲಕ ಹೆಸರು ನೊಂದಾಯಿಸಿಕೊಂಡಿರುವವರು ಮನೆಯಿಂದ ಮತದಾನ ಮಾಡಲು ಏ.18ರ ಸಂಜೆ ವರೆಗೆ ಅವಕಾಶ ಇದೆ ಎಂದು ಹೇಳಿದರು.

5,306 ಹೊಸ ಮತದಾರರು: ಕ್ಷೇತ್ರದಲ್ಲಿ 5,306 ಮಂದಿ ಹೊಸ ಮತದಾರರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 18 ವರ್ಷ ತುಂಬಿದ 2,862 ಯುವಕರು ಮತ್ತು 2,442 ಯುವತಿಯರು ಮತದಾನದ ಹಕ್ಕು ಪಡೆದಿದ್ದಾರೆ. ಕ್ಷೇತ್ರದಲ್ಲಿ 1,06,157 ಪುರುಷ, 1,11,431 ಮಹಿಳಾ ಮತ್ತು 44 ಇತರೆ (ತೃತೀಯ ಲಿಂಗಿ) ಮತದಾರರು ಸೇರಿ ಒಟ್ಟು 2,17,632 ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT