ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ಪ್ರೇಕ್ಷಕರ ಮನಸೆಳೆದ ಡರ್ಟ್ ಟ್ರ್ಯಾಕ್ ಬೈಕ್ ರೇಸ್

Published 23 ಮಾರ್ಚ್ 2024, 15:17 IST
Last Updated 23 ಮಾರ್ಚ್ 2024, 15:17 IST
ಅಕ್ಷರ ಗಾತ್ರ

ನಾಗಮಂಗಲ: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಬಿ.ಜಿ.ಎಸ್ ಡರ್ಟ್ ಟ್ರ್ಯಾಕ್ ಬೈಕ್ ರೇಸ್ ನೆರೆದಿದ್ದ ಪ್ರೇಕ್ಷಕರ ಮನ ಸೆಳೆಯಿತು.

ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಚಿತ್ರನಟ ವಸಿಷ್ಠ ಸಿಂಹ ಅವರು ಬೈಕ್ ರೇಸ್ ಉದ್ಘಾಟಿಸಿದರು. ನಂತರ ಕೆಲ ಸಮಯ ಬೈಕ್ ರೇಸ್ ನಲ್ಲಿ ಸ್ಪರ್ಧಿಗಳ ಸೆಣಸಾಟವನ್ನು ವೀಕ್ಚಣೆ ಮಾಡಿದರು. ಅಲ್ಲದೇ ಬೈಕ್ ರೇಸ್ ಮಾಹಿತಿ ತಿಳಿದಿದ್ದ ತಾಲ್ಲೂಕಿನ ನೂರಾರು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದರು. ರೇಸ್ ಜರುಗುತ್ತಿದ್ದ ಟ್ರ್ಯಾಕ್ ಬದಿಯಲ್ಲಿದ್ದ ಬೆಟ್ಟದ ಬಂಡೆಗಳ ಮೇಲೆ ತಂಡೋಪತಂಡವಾಗಿ ಕುಳಿತು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದ, ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುತ್ತಿದ್ದ ದೃಶ್ಯ ವಿಶೇಷವಾಗಿತ್ತು. ಜೊತೆಗೆ ಸ್ಪರ್ಧೆಯಲ್ಲಿ ರಾಜ್ಯದ ಮತ್ತು ಹೊರರಾಜ್ಯದ ಒಟ್ಟು 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದು, ಎರಡು ವಿಭಾಗಳಾಗಿ ವಿಂಗಡಿಸಲಾಗಿತ್ತು. ಹಿರಿಯರ ವಿಭಾಗದಲ್ಲಿ150 ಮತ್ತು ಕಿರಿಯರ ವಿಭಾಗದಲ್ಲಿ 6ಜನ ಸ್ಪರ್ಧಿಗಳು ಭಾಗವಹಿಸಿದ್ದರು.

ಜೊತೆಗೆ ರೇಸ್ ಗೆ ಕೇರಳ, ಮಹಾರಾಷ್ಟ್ರ, ಕೊಯಮಂತ್ತೂರು, ತಮಿಳುನಾಡು ಸೇರಿದಂತೆ ರಾಜ್ಯದ ಬೆಂಗಳೂರು, ಮೈಸೂರು, ಗೋವಾ ಸೇರಿದಂತೆ ವಿವಿಧ ಭಾಗಗಳಿಂದ ಬಜಾಜ್, ಖವಾಸಿಕಿ, ಟಿ.ವಿ.ಎಸ್, ಮೋಟರ್ ವಾಲಾ ಕಂಪನಿಗಳಿಂದ ಸ್ಪರ್ಧಿಗಳಿಲು ಆಗಮಿಸಿದ್ದರು. ಅಲ್ಲದೇ ರೇಸ್ ನಲ್ಲಿ ವಿಶೇಷವಾಗಿ 16 ವಿಭಾಗಗಳನ್ನು ಮಾಡಿಕೊಂಡಿದ್ದು, ಒಟ್ಟು 48 ವಿಜೇತರನ್ನು ಆಯ್ಕೆ ಮಾಡಲಾಯಿತು.ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾ ಸ್ಪರ್ಧಿಗಳಿಗೆ ಒಟ್ಟು 3.68 ಲಕ್ಷ ಮೊತ್ತದ ಬಹುಮಾನವನ್ನು ನೀಡಲಾಯಿತು. ಜೊತೆಗೆ ವಿಜೇತ ಸ್ಪರ್ಧಿಗಳಿಗೆ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.

ಪ್ರಸನ್ನನಾಥಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ಚಿತ್ರನಟ ವಸಿಷ್ಠ ಸಿಂಹ ಮುಜಾಹಿನ್ ಶೇಖ್, ಕರ್ನಾಟಕ ಆಟೋಮೋಟಿವ್ ರೇಸೀಂಗ್ ಅಸೋಸಿಯೇಷನ್ ಅಧ್ಯಕ್ಷ ಮುಸಾ ಖುರೇಷಿ, ಉಪಾಧ್ಯಕ್ಷ ನಸ್ರುಲ್ಲಾ, ಕಾರ್ಯದರ್ಶಿ ಶಿವಕುಮಾರ್ ಬಂಗಾರಿಗೌಡ, ಸಾಬೀರ್ ಹುಸೇನ್, ಸೇರಿದಂತೆ ಸ್ಪರ್ಧಿಗಳು ಇದ್ದರು.

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬಿ.ಜಿ.ಎಸ್ ಡರ್ಟ್ ಟ್ರ್ಯಾಕ್ ಬೈಕ್ ರೇಸ್ ನಲ್ಲಿ ಸ್ಪರ್ಧಿಗಳು ಗುರಿಯೆಡೆಗೆ ಸಾಗಲು ಬೈಕ್ ಅನ್ನು ಮುನ್ನುಗಿಸುತ್ತಿರುವುದು.
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬಿ.ಜಿ.ಎಸ್ ಡರ್ಟ್ ಟ್ರ್ಯಾಕ್ ಬೈಕ್ ರೇಸ್ ನಲ್ಲಿ ಸ್ಪರ್ಧಿಗಳು ಗುರಿಯೆಡೆಗೆ ಸಾಗಲು ಬೈಕ್ ಅನ್ನು ಮುನ್ನುಗಿಸುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT