ಗುರುವಾರ , ಫೆಬ್ರವರಿ 25, 2021
28 °C

ಕಬ್ಬಿನ ತರಗಿಗೆ ಹಚ್ಚಿದ್ದ ಬೆಂಕಿಗೆ ಸಿಲುಕಿ ರೈತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ (ಮಂಡ್ಯ): ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಬ್ಬಿನ ಗದ್ದೆಯ ತರಗಿಗೆ ಬೆಂಕಿ ಹಾಕಲು ಹೋಗಿದ್ದ ರೈತ ನಿಂಗೇಗೌಡ (71), ಎಡವಿ ಬಿದ್ದು ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಗದ್ದೆಯಲ್ಲಿದ್ದ ಕಬ್ಬನ್ನು ಈಚೆಗೆ ಕಟಾವು ಮಾಡಲಾಗಿತ್ತು. ಗದ್ದೆಯಲ್ಲಿದ್ದ ತರಗು ಮತ್ತು ಗೆಡ್ಡೆಗೆ ಬೆಂಕಿ ಹಚ್ಚಲು ನಿಂಗೇಗೌಡ ಅವರು ಬುಧವಾರ ಸಂಜೆಯೇ ಮನೆಯಿಂದ ತೆರಳಿದ್ದರು. ತರಗನ್ನು ಒಗ್ಗೂಡಿಸಿ ಬೆಂಕಿ ಹಚ್ಚಿ, ಗದ್ದೆಯಿಂದ ಹೊರಗೆ ಬರುವಾಗ ಎಡವಿ ಬಿದ್ದಿದ್ದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ತಹಶೀಲ್ದಾರ್ ಎಂ.ಶಿವಮೂರ್ತಿ, ಎಸ್ಐ ಬ್ಯಾಟರಾಯೀಗೌಡ, ರಾಜಸ್ವ ನಿರೀಕ್ಷಕ ನರೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.