ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ತೆರೆ

ಕೃತಜ್ಞತಾ ಸಭೆ, ಸಹಕರಿಸಿದ ಸಮಿತಿಗಳಿಗೆ ಗೌರವಾರ್ಪಣೆ
Published 26 ಮಾರ್ಚ್ 2024, 23:03 IST
Last Updated 26 ಮಾರ್ಚ್ 2024, 23:03 IST
ಅಕ್ಷರ ಗಾತ್ರ

ನಾಗಮಂಗಲ: ಇಲ್ಲಿನ ಆದಿಚುಂಚನಗಿರಿ ಮಠದಲ್ಲಿ ಒಂಬತ್ತು ದಿನಗಳವರೆಗೆ ನಡೆದ ಜಾತ್ರೆ, ದೈವ ಉಪಾಸನೆಗಳಿಗೆ ಮಂಗಳವಾರ ವಿಧ್ಯುಕ್ತ ತೆರೆ ಬಿತ್ತು.

ಮಠದ ಆವರಣದಲ್ಲಿ ಮುಕ್ತಾಯಗೊಂಡ ಜಾತ್ರಾ ಮಹೋತ್ಸವದ ಸಭೆಯ ಸಾನಿಧ್ಯ ವಹಿಸಿ ಆಶೀರ್ಚನ ನೀಡಿದ, ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ಮನುಷ್ಯರಿಗೆ  ಅಜ್ಞಾನ ಹೋಗದ ಹೊರತು ಸುಜ್ಞಾನವಿಲ್ಲ ಎಂಬುದನ್ನು ಅರಿತು ಸತ್ಸಂಗದಲ್ಲಿ ಭಾಗಿಯಾಗಿ, ಭಕ್ತಿ ಮಾರ್ಗದಲ್ಲಿ ಸಾಗಬೇಕು. ಜಾತ್ರೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದರು.

ಜಾತ್ರಾ ಮಹೋತ್ಸವದ ಪ್ರಯುಕ್ತ ದಾಸೋಹ ಸೇವೆ ನಡೆಸಿದ ಭದ್ರಾವತಿಯ ಕಾಲಭೈರವ ದಾಸೋಹ ಸಮಿತಿ, ಅರಿಶಿನಕುಂಟೆ ರಾಮಕೃಷ್ಣಪ್ಪ ದಂಪತಿ, ತುರುವೇಕೆರೆ ಒಕ್ಕಲಿಗರ ಸಂಘದ ದಾಸೋಹ ಸಮಿತಿ, ಬೆಂಗಳೂರಿನ ಹಿರಿಯ ವಿದ್ಯಾರ್ಥಿಗಳ ದಾಸೋಹ ಟ್ರಸ್ಟ್‌ನ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಪ್ರಮುಖರಾದ ಸಿ.ಎಸ್.ಪುಟ್ಟರಾಜು, ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಎ.ಟಿ.ಶಿವರಾಮು, ಚಂದ್ರೇಗೌಡ ಚಿಕ್ಕಮಗಳೂರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT