ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲಾಡಳಿತದ ಮನವಿ; ಫೆ.7ರ ಮಂಡ್ಯ ಬಂದ್‌ ವಾಪಸ್‌

Published 5 ಫೆಬ್ರುವರಿ 2024, 18:44 IST
Last Updated 5 ಫೆಬ್ರುವರಿ 2024, 18:44 IST
ಅಕ್ಷರ ಗಾತ್ರ

ಮಂಡ್ಯ: ಪ್ರಗತಿಪರ ಸಂಘಟನೆಗಳು ಫೆ.7 ರಂದು ಕರೆ ನೀಡಿದ್ದ ಮಂಡ್ಯ ಬಂದ್ ಅನ್ನು ಜಿಲ್ಲಾಡಳಿತದ ಮನವಿ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆದಿವೆ.

ಕೆರಗೋಡು ಘಟನೆ ಮುಂದಿಟ್ಟುಕೊಂಡು ಸೌಹಾರ್ದತೆಗೆ ಭಂಗ ತಂದ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಸಂಘಟನೆಗಳ  ಮುಖಂಡರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌, ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ನೇತೃತ್ವದಲ್ಲಿ ಸೋಮವಾರ ಸಭೆಯಲ್ಲಿ ಮುಖಂಡರು ಒಮ್ಮತದಿಂದ ಬಂದ್‌ ಕರೆ ಹಿಂಪಡೆದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಶಾಂತಿ ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ. ಶಾಂತಿ, ಸೌಹಾರ್ದತೆ ಕಾಪಾಡಲು ಬಂದ್‌ ಕರೆ ಕೈಬಿಡಬೇಕು’ ಎಂದು ಕೋರಿದರು. ಅದಕ್ಕೆ ಮುಖಂಡರು ಸಮ್ಮತಿಸಿದರು.

‘ಜಿಲ್ಲೆಯ ಶಾಂತಿ ಕದಡಲು ಫೆ.9 ರಂದು ಬಂದ್‌ಗೆ ಕರೆ ನೀಡಿರುವ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಸುನಂದಾ ಜಯರಾಂ ಅವರು, ‘ಫೆ.9 ರಂದೂ ಬಂದ್‌ಗೆ ಜಿಲ್ಲಾಡಳಿತ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT