ನಾಗಮಂಗಲ (ಮಂಡ್ಯ ಜಿಲ್ಲೆ): ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದರು ಎನ್ನಲಾದ ₹ 35 ಲಕ್ಷ ಮೌಲ್ಯದ, 1,595 ಕುಕ್ಕರ್‌ಗಳನ್ನು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ, ಕದಬಹಳ್ಳಿ ಟೋಲ್ ಬಳಿ ಬಿಂಡಿಗನವಿಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೆಕ್ ಪೋಸ್ಟ್ ಮೂಲಕ ಸಾಗುತ್ತಿದ್ದ ಕೆ.ಎ;51, ಎ.ಜಿ–4365 ಕಂಟೇನರ್ ತಪಾಸಣೆ ನಡೆಸಿದಾಗ ವಾಹನದ ತುಂಬೆಲ್ಲಾ ಕುಕ್ಕುರ್‌ಗಳು ಪತ್ತೆಯಾದವು. ತಕ್ಷಣವೇ ಲಾರಿ ಹಾಗೂ ಕುಕ್ಕರ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.

ಶಾಸಕ ಟಿ.ಡಿ.ರಾಜೇಗೌಡ ಅವರು ಬಾಳೆಹೊನ್ನೂರಿನ ಕೃಷ್ಣ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕ್ ಅಂಗಡಿಯಿಂದ ಕುಕ್ಕರ್‌ಗಳನ್ನು ಖರೀದಿ ಮಾಡಿದ್ದರು ಎಂಬುದು ವಿಚಾರಣೆ ನಂತರ ಗೊತ್ತಾಗಿದೆ. ಎಲೆಕ್ಟ್ರಿಕ್ ಅಂಗಡಿ ಮಾಲೀಕ ಹಾಗೂ ಶಾಸಕ ಟಿ.ಟಿ.ರಾಜೇಗೌಡರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.