ಮಂಡ್ಯ ತಾಲ್ಲೂಕಿನ 108 ಮಂದಿ, ನಾಗಮಂಗಲ 46, ಮದ್ದುರು 35, ಕೆ.ಆರ್.ಪೇಟೆ 28, ಶ್ರೀರಂಗಪಟ್ಟಣ 27, ಪಾಂಡವಪುರ 22, ಮಳವಳ್ಳಿ ತಾಲ್ಲೂಕಿನ 13 ಮಂದಿಗೆ ಸೋಂಕು ಪತ್ತೆಯಾಗಿದೆ. ಕೋವಿಡ್ನಿಂದ ಗುಣಮುಖರಾದ 65 ಮಂದಿಯನ್ನು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಒಟ್ಟು ಸೋಂಕಿತರಲ್ಲಿ 8,464 ಮಂದಿ ಗುಣಮುಖರಾಗಿದ್ದು 1759 ಪ್ರಕರಣಗಳು ಸಕ್ರಿಯವಾಗಿವೆ.