ಶ್ರೀರಂಗಪಟ್ಟಣ: ತಾಲ್ಲೂಕಿನ ಮುಂಡುಗದೊರೆ ಗ್ರಾಮದಲ್ಲಿ ಪರಿಶಿಷ್ಟರ ಸ್ಮಶಾನ ಮತ್ತು ಜಮೀನಿಗೆ ಹೋಗಲು ರಸ್ತೆಗಾಗಿ ಮೀಸಲಿಟ್ಟಿದ್ದ ಸರ್ಕಾರಿ ಜಾಗವನ್ನು ವ್ಯಕ್ತಿಯೊಬ್ಬರಿಗೆ ದರಖಾಸ್ತು ಮೂಲಕ ಮಂಜೂರು ಮಾಡಿದ್ದು, ಅದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ, ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಮುಂಡುಗದೊರೆ ಗ್ರಾಮಸ್ಥರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧದ ಎದುರು ಒಂದೂವರೆ ತಾಸು ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು. ‘ಸ್ಮಶಾನ ಮತ್ತು ಜಮೀನಿಗೆ ಸಂಪರ್ಕ ಕೊಂಡಿಯಾಗಿದ್ದ ರಸ್ತೆಯೂ ಸೇರಿದಂತೆ ಸರ್ವೆ ನಂ 391ರ ಸರ್ಕಾರಿ ಖರಾಬು ಜಮೀನನ್ನು ಖಾಸಗಿ ವ್ಯಕ್ತಿಗೆ ದರಖಾಸ್ತು ಮೂಲಕ ತಾಲ್ಲೂಕು ಆಡಳಿತ ಮಂಜೂರು ಮಾಡಿದೆ. ಹಲವು ದಶಕಗಳಿಂದ ಪರಿಶಿಷ್ಟ ಜನಾಂಗ ಬಳಸುತ್ತಿದ್ದ ದಾರಿಗೆ ತಂತಿ ಬೇಲಿ ಹಾಕಿದ್ದು, ಶವ ಸಾಗಿಸಲು ತೊಂದರೆಯಾಗಿದೆ. ಪರಿಶಿಷ್ಟ ಜನರು ತಮ್ಮ ಜಮೀನಿಗೆ ಸುತ್ತಿ ಬಳಸಿ ಹೋಗುವ ಪರಿಸ್ಥಿತಿ ಬಂದಿದೆ. ಸರ್ಕಾರಿ ಜಾಗ ಮಂಜೂರು ಮಾಡಿರುವುದನ್ನು ರದ್ದುಪಡಿಸಬೇಕು’ ಎಂದು ಮುಖಂಡ ಮೋಹನಕುಮಾರ್ ಆಗ್ರಹಿಸಿದರು.

‘ಸ್ಮಶಾನದ ರಸ್ತೆ ಜಾಗವನ್ನು ದರಖಾಸ್ತು ಮೂಲಕ ಮಂಜೂರು ಮಾಡಬಾರದು ಎಂದು ಆಕ್ಷೇಪ ಸಲ್ಲಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಮೊದಲು ಇದ್ದಂತೆ ಸ್ಮಶಾನ ಮತ್ತು ಜಮೀನಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ದರಖಾಸ್ತು ಮೂಲಕ ಜಮೀನು ಮಂಜೂರು ಮಾಡಿಸಿಕೊಂಡಿರುವ ವ್ಯಕ್ತಿ ಸಿಡಿಎಸ್ ನಾಲೆ ಏರಿಯ ಡಾಂಬರು ರಸ್ತೆಯನ್ನು ಅಗೆದು ಬೇಲಿ ಹಾಕಿದ್ದಾರೆ. ಅದನ್ನು ತೆರವು ಮಾಡಿಸಿ ನಾಲೆಗೆ ಸೋಪಾನ ಕಟ್ಟೆ ನಿರ್ಮಿಸಿಕೊಡಬೇಕು. ಅದೇ ವ್ಯಕ್ತಿ ಮುಂಡುಗದೊರೆ ಅಂಗನವಾಡಿ ಕೇಂದ್ರದ ಸುತ್ತ ತಂತಿ ಬೇಲಿ ಹಾಕಿದ್ದು ಅದನ್ನೂ ತೆರವು ಮಾಡಿಸಬೇಕು’ ಎಂದು ಶ್ರೀಕಂಠಯ್ಯ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಚೇತನಾ ಯಾದವ್, ‘ದರಸಖಾಸ್ತು ಮೂಲಕ ಮಂಜೂರಾಗಿರುವ ಜಮೀನಿಗೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲಿಸಲಾಗುವುದು. ಪರಿಶಿಷ್ಟರ ಸ್ಮಶಾನ ಮತ್ತು ಜಮೀನಿಗೆ ರಸ್ತೆ ಸಂಪರ್ಕ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ, ಕುಬೇರಪ್ಪ, ರಮೇಶ್, ನವೀನ್, ಕೇಶವಮೂರ್ತಿ, ಮಹೇಶ್, ಲೋಕೇಶ್, ಪ್ರಿಯಾ ರಮೇಶ್, ನಾಗರಾಜು, ಮಹದೇವಸ್ವಾಮಿ, ಶಿವಣ್ಣ, ನಾಗಮ್ಮ, ಮಂಗಳಮ್ಮ, ಚಂದ್ರಮ್ಮ, ಜಯಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.