ಭಾರತೀನಗರ: ಇಲ್ಲಿನ ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ಲಯನ್ಸ್ ಕ್ಲಬ್ ಆಫ್ ಮದ್ದೂರು ಕದಂಬ ವತಿಯಿಂದ ಸಮವಸ್ತ್ರ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಪೌರಕಾರ್ಮಿಕರಿಗೆ ಸಂಸ್ಥೆಯ ಮೆಳ್ಳಹಳ್ಳಿ ಶ್ರೀನಿವಾಸ್ ಸಾಂಕೇತಿಕ ಸಮವಸ್ತ್ರ ವಿತರಿಸಿದರು.
ಸಂಸ್ಥೆಯ ಖಜಾಂಚಿ ಎಸ್.ಬಿ.ನಾಗರಾಜು ಮಾತನಾಡಿ, ‘ಪೌರಕಾರ್ಮಿಕರು ಮುಂಜಾನೆಯೇ ಎದ್ದು ನಗರಗಳ, ಗ್ರಾಮಗಳ ಸ್ವಚ್ಚತೆಯ ಕಾರ್ಯ ಮಾಡುತ್ತಾರೆ. ಪೌರಕಾರ್ಮಿಕರು ಯಾವುದೇ ರೀತಿಯ ಅಪೇಕ್ಷೆಗಳಿಲ್ಲದೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ನಡೆಸುತ್ತಿದ್ದಾರೆ. ಇವರ ನೆರವಾಗುವುದು ಒಂದು ಸೌಭಾಗ್ಯ. ಆ ಹಿನ್ನೆಲೆಯಲ್ಲಿ ಎಲ್ಲಾ ಪೌರಕಾರ್ಮಿಕರಿಗೆ ಶ್ರೀನಿವಾಸ್ ಸಮವಸ್ತ್ರ ನೀಡಿರುವುದು ಮೆಚ್ಚುವ ಕಾರ್ಯ ಎಂದು ಹೇಳಿದರು.
ಮದ್ದೂರು ಕದಂಬ ಲಯಯನ್ಸ್ ಅಧ್ಯಕ್ಷ ಕೆಂಗಲ್ ಗೌಡ, ಸಿದ್ದೇಗೌಡ, ಮೆಲ್ಲಹಳ್ಳಿ ಶ್ರೀನಿವಾಸ್, ಕೇಬಲ್ ಮಹೇಶ್, ದಿನೇಶ್, ಕೆ ಶಿವಕುಮಾರ್, ಲಿಂಗನದೊಡ್ಡಿ ನಾಗರಾಜು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.