‘ಬನ್ನಿ ಮಂಟಪದ ಮೇಲೆ ಬೆಳೆಯುತ್ತಿರುವ ಗಿಡಗಳ ಬೇರುಗಳು ಆಳಕ್ಕೆ ಇಳಿದರೆ ಚಾವಣಿ ಮತ್ತು ಚುರಕಿ ಗಾರೆಯಲ್ಲಿ ಬಿರುಕು ಮೂಡುವ ಅಪಾಯವಿದೆ. ದಸರಾ ಉತ್ಸವ ಸಮೀಪಿಸಿದಾಗ ಮಾತ್ರ ಈ ಮಂಟಪಕ್ಕೆ ಬಣ್ಣ ಬಳಿಯಲಾಗುತ್ತದೆ. ಅದನ್ನು ಹೊರತುಪಡಿಸಿದರೆ ವರ್ಷ ಪೂರ್ತಿ ಇದು ದಾರಿಹೋಕರ ತಂಗುದಾಣವಾಗುತ್ತದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಬಾಬುರಾಯನಕೊಪ್ಪಲಿನ ರೈತ ಮುಖಂಡ ಬಿ.ಎಸ್. ರಮೇಶ್ ಒತ್ತಾಯಿಸುತ್ತಾರೆ.