ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವಪುರ: ಬೇಬಿಬೆಟ್ಟದಲ್ಲಿ ಸ್ಫೋಟಕ ವಸ್ತು ಪತ್ತೆ

Last Updated 17 ಜುಲೈ 2021, 3:37 IST
ಅಕ್ಷರ ಗಾತ್ರ

ಪಾಂಡವಪುರ (ಮಂಡ್ಯ): ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಬೇಬಿ ಬೆಟ್ಟದ ಸರ್ವೇ ನಂ.1ರಲ್ಲಿ ಗಣಿಗಾರಿಕೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದ್ದರೂ ಶುಕ್ರವಾರ ಸ್ಫೋಟಕಗಳು ಪತ್ತೆಯಾಗಿವೆ.

ಬೇಬಿಬೆಟ್ಟದಲ್ಲಿನ ಆಶೀರ್ವಾದ ಕ್ರಷರ್ ಮಾಲೀಕರಿಗೆ ಸೇರಿದ ಕ್ವಾರಿಯೊಂದರ ಸಮೀಪ ಕಂಡು ಬಂದ ಸುಮಾರು 40 ಜಿಲಿಟನ್‌, ಡಿಟೋನೇಟರ್‌ ಹಾಗೂ ಮೆಗ್ಗರ್ ಬ್ಲಾಸ್ಟ್‌ಗೆ ಬಳಸಲಾಗುವ ವಾಹಕ (ವೈರ್‌)ಗಳನ್ನು ಕುರಿಗಾಹಿಗಳು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಆ ಕ್ವಾರಿ ಸ್ಥಳಕ್ಕೇ ಸುಮಲತಾ ಇತ್ತೀಚೆಗೆ ಭೇಟಿ ನೀಡಿದ್ದರು.

ಅವರ ಭೇಟಿ ಹಿನ್ನೆಲೆಯಲ್ಲಿ ಸ್ಫೋಟಕಗಳನ್ನು ಎಸೆದಿರಬಹುದು ಅಥವಾ ಅಕ್ರಮವಾಗಿ ಗಣಿಗಾರಿಕೆ ನಡೆಸುವ ಸಲುವಾಗಿ ಬಚ್ಚಿಟ್ಟಿರಬಹುದು. ನಾಲ್ಕೈದು ದಿನಗಳಿಂದ ಮಳೆಯಲ್ಲಿ ತೊಯ್ದಿರುವ ಎಲ್ಲಾ ಸ್ಫೋಟಕಗಳು ಜೀವಂತವಾಗಿದ್ದು ದನಕುರಿ ಮೇಯಿಸುವವರು ಬೀಡಿ, ಸಿಗರೇಟು ಸೇದಿ ಎಸೆದ ಬೆಂಕಿ ತಗುಲಿದ್ದರೆ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.

ಗಣಿ ಸ್ಫೋಟದ ಶಬ್ದ: ’ಶುಕ್ರವಾರ ಸಂಜೆ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಸ್ಫೋಟದ ಶಬ್ದ ಕೇಳಿ ಬಂದಿತು’ ಎಂದು ಬೇಬಿ ಗ್ರಾಮದ ಜನರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT