ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಗ್ರಾಮದ ಸಿಡಿಎಸ್ ನಾಲೆಯ 62ನೇ ತೂಬಿನ ವಿತರಣಾ ನಾಲೆಯ ಏರಿ ಮತ್ತು ಅದರ ಸಂಪರ್ಕ ರಸ್ತೆ ಅತಿಕ್ರಮ ತೆರವು ಮಾಡಿಸುವಂತೆ ಆಗ್ರಹಿಸಿ ತಾಲ್ಲೂಕಿನ ದರಸಗುಪ್ಪೆ ಗ್ರಾಮದ ರೈತ ಪ್ರಭಾಕರ್ ಎಂಬವರು ಪಟ್ಟಣದ ಮಿನಿ ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸುತ್ತಿದ್ದು, ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಕೆ. ಬೋರಯ್ಯ, ಸುನಂದಾ ಜಯರಾಂ, ಮಂಡ್ಯ ರಕ್ಷಣಾ ವೇದಿಕೆಯ ಬಿ. ಶಂಕರಬಾಬು, ಕಾಂಗ್ರೆಸ್ ಮುಖಂಡರಾದ ಕೂಡಲಕುಪ್ಪೆ ರವಿಶಂಕರ್, ನೆಲಮನೆ ನಾಗೇಂದ್ರು, ಶಂಕರ್ ಇತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸತ್ಯಾಗ್ರಹ ಕೈಬಿಡುವಂತೆ ಪ್ರಭಾಕರ್ ಅವರ ಮನವೊಲಿಸುವ ವಿಫಲ ಯತ್ನ ನಡೆಸಿದರು.

‘ಕಿರಂಗೂರು ಸ.ನಂ. 1078/1, 1078/4 ಮತ್ತು 1033/1ಬಿ2 ನಡುವೆ ಇರುವ ವಿತರಣಾ ನಾಲೆಯ ಏರಿಗೆ ಸೇರಿದ ಸರ್ಕಾರಿ ಖರಾಬು ಮತ್ತು ವಿತರಣಾ ನಾಲೆಯ ಸಂಪರ್ಕ ರಸ್ತೆಯ ಅತಿಕ್ರಮ ತೆರವು ಮಾಡಿಸಿ ರಸ್ತೆ ನಿರ್ಮಿಸಬೇಕು. ಅತಿಕ್ರಮ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. 21 ವರ್ಷಗಳಿಂದ ನನ್ನ ಜಮೀನು ಪಾಳು ಬಿಟ್ಟಿದ್ದು ಪರಿಹಾರ ನೀಡಬೇಕು. ಅಲ್ಲಿಯವರೆಗೆ ಸತ್ಯಾಗ್ರಹ ನಡೆಯಲಿದೆ. ಮಾ.25ರ ನಂತರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಪ್ರಭಾಕರ್ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.