ಮಂಡ್ಯ: ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆದಿದ್ದ ‘ಡೆಕಾಯ್ ಕಾರ್ಯಾಚರಣೆ’ ಈಗ ನೆರೆ ರಾಜ್ಯ ಆಂಧ್ರಪ್ರದೇಶಕ್ಕೂ ವಿಸ್ತರಿಸಿದೆ. ಕರ್ನಾಟಕ ಮತ್ತು ಆಂಧ್ರದ ವೈದ್ಯರ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಆಂಧ್ರದ ಖಾಸಗಿ ನರ್ಸಿಂಗ್ ಹೋಮ್ಗೆ ಬೀಗ ಬಿದ್ದಿದೆ.

ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಘಟನೆಗಳಿಂದ ವರ್ಷದ ಹಿಂದೆ ಮಂಡ್ಯ ಜಿಲ್ಲೆಯು ಇಡೀ ರಾಜ್ಯದಲ್ಲೇ ಸದ್ದು ಮಾಡಿತ್ತು. ಜತೆಗೆ, ಈ ಜಾಲವು ಮಂಡ್ಯ ಮಾತ್ರವಲ್ಲದೆ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಸ್ತರಣೆಯಾಗಿರುವುದು ತನಿಖೆಯಿಂದ ದೃಢಪಟ್ಟಿತ್ತು. ಇದೀಗ ಇದೇ ಜಾಲವು ನೆರೆಯ ಆಂಧ್ರಪ್ರದೇಶಕ್ಕೂ ಹಬ್ಬಿರುವುದು ಭ್ರೂಣಲಿಂಗ ಪತ್ತೆ ಪ್ರಕರಣವೊಂದರ ಮೂಲಕ ಬೆಳಕಿಗೆ ಬಂದಿದೆ.

ಮಂಡ್ಯದ ವೈದ್ಯರು ಮತ್ತು ಅಧಿಕಾರಿಗಳ ತಂಡವು ಆರೋಗ್ಯ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳ ಮೂಲಕ ಆಂಧ್ರ ಅಧಿಕಾರಿಗಳನ್ನು ಸಂಪರ್ಕಿಸಿ, ಕರ್ನೂಲ್ ಜಿಲ್ಲೆಯ ಕೊಡಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂನಲ್ಲಿ ಕಾನೂನುಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದನ್ನು ಪತ್ತೆ ಮಾಡಿ, ಆಸ್ಪತ್ರೆಗೆ ಬೀಗ ಹಾಕಿಸುವಲ್ಲಿ ಯಶಸ್ವಿಯಾಗಿದೆ.

ಡಿಎಚ್ಒ ಡಾ.ಕೆ. ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮಳವಳ್ಳಿ ತಾಲ್ಲೂಕು ದುಗ್ಗನಹಳ್ಳಿ ಪಿಎಚ್ಸಿ ವೈದ್ಯಾಧಿಕಾರಿ ಡಾ.ಸೆರೆನ್ ನಮ್ರತಾ, ಎನ್ಎನ್ಎಂ ನಂದಿನಿ, ಸಮುದಾಯ ಆರೋಗ್ಯಾಧಿಕಾರಿ ಕಿರಣ್ ಅವರು ಡೆಕಾಯ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಏನಿದು ಪ್ರಕರಣ?

ಬಳ್ಳಾರಿ ಜಿಲ್ಲೆ ದೂಪರದಹಳ್ಳಿ ತಾಂಡ ಕುಟುಂಬವೊಂದು ಕಬ್ಬು ಕಟಾವು ಕೆಲಸಕ್ಕಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮಕ್ಕೆ ವಲಸೆ ಬಂದಿತ್ತು. ಈ ಮಧ್ಯೆ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯು ಬಳ್ಳಾರಿ ಕುಟುಂಬದ ಗರ್ಭಿಣಿಯ ಆರೋಗ್ಯ ತಪಾಸಣೆ ನಡೆಸಿ, ಮಗುವಿನ ಬೆಳವಣಿಗೆ ಮತ್ತು ಆರೋಗ್ಯದ ಸ್ಥಿತಿ ಅರಿಯಲು ಸ್ಕ್ಯಾನಿಂಗ್ ಮಾಡಿಕೊಂಡು ಬರುವಂತೆ ಸಲಹೆ ನೀಡಿದ್ದರು.

ಆದರೆ, ಕೆಲವು ದಿನಗಳವರೆಗೆ ಸ್ಕ್ಯಾನಿಂಗ್ ಮಾಡಿಕೊಂಡು ಬಾರದ ಮಹಿಳೆಯರು, ಇದ್ದಕ್ಕಿದ್ದಂತೆ ಬಳ್ಳಾರಿಗೆ ತೆರಳಿದ್ದರು. ಕೆಲವು ದಿನಗಳ ಬಳಿಕ ಬಂಡೂರಿಗೆ ವಾಪ ಸ್ ಆಗಿದ್ದ ಮಹಿಳೆಯರು ಬೇಸರದಲ್ಲಿ ಕುಳಿತಿರುವುದನ್ನು ಗಮನಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ವಿಚಾರಿಸಿದಾಗ, ‘ಈಗಾಗಲೇ ನನಗೆ ಮೂರು ಹೆಣ್ಣು ಮಕ್ಕಳಿವೆ. 4ನೇ ಮಗುವೂ ಹೆಣ್ಣಾಗಿದ್ದರಿಂದ ಗರ್ಭಪಾತ ಮಾಡಿಸಲಾಗಿತ್ತು. ಇದೀಗ 5ನೇ ಮಗುವೂ ಹೆಣ್ಣಾಗಿದೆ’ ಎಂದು ಬಾಯಿತಪ್ಪಿ ಹೇಳಿದ್ದರು.

‘ಬಳ್ಳಾರಿಯಲ್ಲಿ ಏಜೆಂಟರಿರುವ ಅನುಮಾನ’

‘ಆಂಧ್ರದ ಬಾಷಾ ನರ್ಸಿಂಗ್ ಹೋಂನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿಸಿದ ಸಂಗತಿ ಖಚಿತವಾಗುತ್ತಿದ್ದಂತೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆಂಧ್ರದ ಪಿಸಿ ಅಂಡ್ ಪಿಎನ್ಡಿಟಿ ಅಧಿಕಾರಿಗಳೊಂದಿಗೆ ಮಹಾಲಯ ಅಮಾವಾಸ್ಯೆ ಹಬ್ಬದಂದು ದಾಳಿ ನಡೆಸಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ’ ಎಂದು ಡಿಎಚ್ಒ ಡಾ.ಕೆ.ಮೋಹನ್ ತಿಳಿಸಿದರು. ‘ಇದೇ ಆಸ್ಪತ್ರೆಯಲ್ಲಿ ಕರ್ನಾಟಕದ ಹಲವು ಮಂದಿ ಭ್ರೂಣಲಿಂಗ ಪತ್ತೆ ಮಾಡಿಕೊಂಡಿರುವ ಮಾಹಿತಿಯಿದೆ. ಬಳ್ಳಾರಿಯಲ್ಲೂ ಏಜೆಂಟರಿರುವ ಅನುಮಾನ ದಟ್ಟವಾಗಿದೆ. ಈ ಬಗ್ಗೆ ಇಲಾಖೆ ಕ್ರಮ ವಹಿಸಲಿದೆ. ಜತೆಗೆ ಜಿಲ್ಲೆಯಲ್ಲೂ ಪಿಎಚ್ಸಿ ಉಪ ಕೇಂದ್ರದ ಮಟ್ಟದಲ್ಲಿ ಕಟ್ಟುನಿಟ್ಟಿನ ಪರಿಶೀಲನಾ ಕರ್ಯ ಕೈಗೊಳ್ಳಲಾಗಿದೆ. ತಡವಾಗಿ ನೊಂದಣಿ ಮಾಡಿಸುವ ಗರ್ಭಿಣಿಯರ ಹಾಗೂ 1 2ನೇ ಮಗು ಹೆಣ್ಣಾಗಿದ್ದು 3ನೇ ಬಾರಿಗೆ ಗರ್ಭಿಣಿಯರ ಬಗ್ಗೆ ಹೆಚ್ಚು ನಿಗಾ ಇಡಲಾಗುವುದು’ ಎಂದು ಹೇಳಿದರು.

‘₹1 ಲಕ್ಷ ಬಹುಮಾನದ ಆಫರ್’

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದುಗ್ಗನಹಳ್ಳಿ ಪಿಎಚ್ಸಿ ವೈದ್ಯಾಧಿಕಾರಿ ಡಾ.ಸೆರೆನ್ ನಮ್ರತಾ ಎನ್.ಎನ್.ಎಂ. ನಂದಿನಿ ಸಮುದಾಯ ಆರೋಗ್ಯಾಧಿಕಾರಿ ಕಿರಣ್ ಅವರು ಈ ವಿಚಾರವನ್ನು ಡಿಎಚ್ಒ ಮತ್ತು ಟಿಎಚ್ಒ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಡಿಎಚ್ಒ ಡಾ.ಕೆ.ಮೋಹನ್ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಟಿಎಚ್ಒ ಡಾ.ವೀರಭದ್ರಪ್ಪ ಅವರು ಮಹಿಳೆಯರ ಕುಟುಂಬದವರನ್ನು ಸಂಪರ್ಕಿಸಿ ಅನುಮಾನ ಬಾರದಂತೆ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಿದ್ದಾರೆ. ಆ ಕುಟುಂಬ ಸಾಲದ ಸುಳಿಗೆ ಸಿಲುಕಿದ್ದ ಅಂಶದ ಆಧಾರದ ಮೇಲೆ ‘ಎಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿದ್ದೆಂದು ತಿಳಿಸಿದರೆ ನಿಮಗೆ ಆರೋಗ್ಯ ಇಲಾಖೆಯಿಂದ ₹1 ಲಕ್ಷ ಬಹುಮಾನ ಕೊಡುತ್ತೇವೆ. ಆ ಹಣದಲ್ಲಿ ಸಾಲ ತೀರಿಸಿಕೊಳ್ಳಬಹುದು’ ಎಂದು ಆಸೆ ಹುಟ್ಟಿಸಿದ್ದಾರೆ. ಆಗಷ್ಟೇ ಕರ್ನೂಲ್ ಜಿಲ್ಲೆಯ ಕೊಡಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿಸಿದ ಸಂಗತಿ ಬಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.