ಲೋಕಾಯುಕ್ತ ಅಧಿಕಾರಿಗಳು ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿಯನ್ನು ತೆರವುಗೊಳಿಸಬೇಕು
ಹರವು ದೇವೇಗೌಡ ಪರಿಸರ ಪ್ರೇಮಿ ಮಂಡ್ಯ
‘19 ಅಂಶಗಳ ಮಾಹಿತಿ ಒದಗಿಸಿ’
3 ವರ್ಷಗಳಲ್ಲಿ ಮರಗಳು ಅರಣ್ಯ ನಾಶ ಹಾಗೂ ಒತ್ತುವರಿ ಪ್ರಮಾಣ ವಾರ್ಷಿಕವಾಗಿ ನೈಸರ್ಗಿಕ ಪುನರುತ್ಪಾದನೆಗೆ ಅನುಮೋದನೆಯಾದ ಬಜೆಟ್ ಮೊತ್ತ ಅರಣ್ಯ ಇಲಾಖೆಯ ಜಾಗೃತದಳ ಕೈಗೊಂಡ ಕ್ರಮಗಳು ಸಸಿ ನೆಡಲು ಮಂಜೂರಾದ ಹಣ ನೆಟ್ಟಿರುವ ಸಸಿ ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳ ಬಗ್ಗೆ ಲೋಕಾಯುಕ್ತರು ಮಾಹಿತಿ ಕೇಳಿದ್ದಾರೆ. ಜೊತೆಗೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮತ್ತು ಮರಳುಗಾರಿಕೆ ತಡೆಗಟ್ಟಲು ಕೈಗೊಂಡ ಕ್ರಮಗಳು ತಾಲ್ಲೂಕುವಾರು ನಿರ್ಮಿಸಿದ ಫೈರ್ ಲೈನ್‌ಗಳು ಅರಣ್ಯಕ್ಕೆ ಬೆಂಕಿ ಹಾಕುವುದನ್ನು ತಡೆಯಲು ಕೈಗೊಂಡ ಕ್ರಮಗಳು ತಾಲ್ಲೂಕುವಾರು ಡೀಮ್ಡ್ ಫಾರೆಸ್ಟ್ ಪ್ರಮಾಣ ಮತ್ತು ಎಷ್ಟು ವಿಸ್ತೀರ್ಣಕ್ಕೆ ಫೆನ್ಸಿಂಗ್ ಹಾಕಲಾಗಿದೆ ಎಂಬ ಬಗ್ಗೆಯೂ ವಿವರವಾದ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.