ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರ(ಬ್ಲಪ್) ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತೋತ್ಸವವು ಸೆ.13 ಮತ್ತು 14ರಂದು ಅದ್ದೂರಿಯಾಗಿ ನಡೆಯಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಗಗನಚುಕ್ಕಿ ಜಲಪಾತ, ಮಲ್ಲಿಕ್ಯಾತನಹಳ್ಳಿ ಬಳಿ ವಾಹನ ನಿಲುಗಡೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಜಾಗವನ್ನು ಭಾನುವಾರ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಸಿದ್ಧತೆಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.

ಗಗನಚುಕ್ಕಿ ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಕೋರಲಾಗಿದ್ದು, ಈ ಬಾರಿ ರೊಟ್ಟಿಕಟ್ಟೆ ಬಳಿ ಬೆಂಗಳೂರಿನ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿರುವುದರಿಂದ ವೇದಿಕೆ ಕಾರ್ಯಕ್ರಮವನ್ನು ಮಲ್ಲಿಕ್ಯಾತನಹಳ್ಳಿ ಸಮೀಪ ನಡೆಸಲಾಗುತ್ತದೆ. ಜಲಪಾತೋತ್ಸವದ ವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಮಲ್ಲಿಕ್ಯಾತನಹಳ್ಳಿಯಿಂದ 25 ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗುವುದು. ಜಾನಪದ ಸೊಗಡು, ಜಲಸಿರಿಯ ವೈಭವವ ಪ್ರದರ್ಶನದ, ರೊಟ್ಟಿ ಕಟ್ಟೆಯಿಂದ ವೇದಿಕೆವರೆ ದೀಪಾಲಂಕಾರ ಮಾಡಬೇಕು. ಮಲ್ಲಿಕ್ಯಾತನಹಳ್ಳಿ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ದಸರಾದ ಜೊತೆಗೆ, ಜಲಪಾತೋತ್ಸವಜಲಪಾತೋತ್ಸವಕ್ಕೆ ಲೈಂಟಿಗ್ಸ್ ಮತ್ತು ಲೇಸರ್ ಶೋ ಇರಲಿದೆ. ನೇರಪ್ರಸಾರದ ವ್ಯವಸ್ಥೆ ಇರುತ್ತದೆ ಎಂದು ವಿವರಿಸಿದರು. ತಾಲ್ಲೂಕಿನಿಂದ ಬರುವ ಜನರಿಗೆ ಉಚಿತ ಸಾರಿಗೆ ವ್ಯವಸ್ಥೆಮಾಡಲಾಗಿದೆ. ಸಾರಿಗೆ ಸೌಲಭ್ಯ, ಉಚಿತ ಊಟ, ಕುಡಿಯುವ ನೀರು ಹಾಗೂ ಪ್ರತ್ಯೇಕ ಶೌಚಾಯಲದ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ವಿವಿಧ ಮಳಿಗೆಗಳನ್ನು ತೆರಯುವ ಸಂಬಂಧ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಇಲ್ಲಿನ ವ್ಯಾಪಾರಿಗಳಿಗೆ ಮಲ್ಲಿಕ್ಯಾತನಹಳ್ಳಿ ಬಳಿಯೇ ಸ್ಥಳಾವಕಾಶ ನೀಡಲಾಗುತ್ತದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ವಿ.ಕೃಷ್ಣಪ್ಪ, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಅಧಿಕಾರಿಗಳಾದ ಎ.ಎಂ.ಸೋಮಶೇಖರ್, ಅಪ್ಪಣ್ಣ ಬೋಯಿ, ಎಚ್.ಎಸ್.ಪ್ರೇಮ್ ಕುಮಾರ್, ಭರತೇಶ್ ಕುಮಾರ್, ರಂಗಸ್ವಾಮಿ, ಮನ್ ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಸಿಪಿಐ ಬಿ.ಎಸ್.ಶ್ರೀಧರ್, ಎಂ.ಪಿ.ರವಿಶಂಕರ್, ಎಚ್.ಎಸ್.ಲಂಕೇಶ್, ಪಿಡಿಓ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷ ಬಿ.ರಘು, ಮುಖಂಡರಾದ ಕೆ.ಜೆ.ದೇವರಾಜು, ಮಹದೇವು, ಶ್ರೀಕಾಂತ್, ಶ್ರೀನಿವಾಸ್, ಸಿ.ಎಂ.ವೇದಮೂರ್ತಿ, ಅಶ್ವತ್ ಕುಮಾರ್ ಪಾಲ್ಗೊಂಡಿದ್ದರು.

‘ಸಮಿತಿ ರಚನೆ’

ಜಿಲ್ಲಾಧಿಕಾರಿ ಕುಮಾರ ಮಾತನಾಡಿ ಜಲಪಾತೋತ್ಸವದ ಅದ್ದೂರಿ ಆಚರಣೆ ಹಾಗೂ ಯಶಸ್ವಿಗೆ ವೇದಿಕೆ ಸಮಿತಿ ಸಾಂಸ್ಕೃತಿಕ ಸಾರಿಗೆ ಆರೋಗ್ಯ ಸ್ವಚ್ಛತೆ ಆಹಾರ ಮುಂತಾದ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.