ಮಂಡ್ಯ: ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ನ.12, 13 ಮತ್ತು 14ರಂದು ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ‘ಸತ್ಯಶೋಧನೆ-100 ಗಾಂಧೀಜಿ ಎಂಬ ವರ್ತಮಾನ’ ಮೂರು ದಿನಗಳ ಚಿಂತನ– ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನ.12ರ ಬೆಳಿಗ್ಗೆ 9ರಿಂದ 10ವರೆಗೆ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಬಿ.ರಾಮಕೃಷ್ಣ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 2.15ಕ್ಕೆ ಗೋಷ್ಠಿ-1: ಸತ್ಯ ಶೋಧನೆ- 100 ಮತ್ತು ವರ್ತಮಾನ, ಸಂಜೆ 4ಕ್ಕೆ ಗೋಷ್ಠಿ-2: ಗಾಂಧೀಜಿ ಪ್ರಭಾವಿಸಿದ ಜಾಗತಿ ಮನಸ್ಸುಗಳು ವಿಷಯ ಮಂಡನೆಯಾಗಲಿದೆ. ಗೋಷ್ಠಿಗೆ ಎಸ್.ಜಿ.ಸಿದ್ದರಾಮಯ್ಯ, ಶಶಿಧರ್ ಭಾರಿಘಾಟ್, ಪ್ರೊ.ಬಿ.ಬಿ.ಶಿವರಾಜು, ಗಣೇಶ್ ಚಿಕ್ಕಮಗಳೂರು ವಿಷಯ ಮಂಡಿಸಲಿದ್ದಾರೆ. ಸಂಜೆ 6ಕ್ಕೆ ಬೊಮ್ಮರಸೇಗೌಡರ ಮಹಾತ್ಮ ಗಾಂಧಿ ಕಾವ್ಯ-ಗಮಕ ಮತ್ತು ವ್ಯಾಖ್ಯಾನವನ್ನು ತುಮಕೂರಿನ ಗಮಕಿ ಲಕ್ಷ್ಮಣದಾಸ್ ನಡೆಸಿಕೊಡಲಿದ್ದಾರೆ.

ನ.13ರ ಬೆಳಿಗ್ಗೆ 10.30ಕ್ಕೆ ಗೋಷ್ಠಿ-3: ಗಾಂಧೀಜಿ ಮತ್ತು ಕನ್ನಡ ಮನಸ್ಸು, ಮಧ್ಯಾಹ್ನ 12.15ಕ್ಕೆ ಗೋಷ್ಠಿ-4: ಮಂಡ್ಯ ಜಿಲ್ಲೆಯ ಮೇಲೆ ಗಾಂಧೀಜಿ ಪ್ರಭಾವ, ಮಧ್ಯಾಹ್ನ 2.30ಕ್ಕೆ ಗೋಷ್ಠಿ-5 ಗಾಂಧೀಜಿ-ಅಂಬೇಡ್ಕರ್ ವಿಚಾರಧಾರೆಗಳ ಸಮನ್ವಯ, ಸಂಜೆ 4ಕ್ಕೆ ಗೋಷ್ಠಿ-6 ಗಾಂಧೀಜಿ ಅವರ ಶಿಕ್ಷಣದ ನೆಲೆಗಳು ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಲಿದ್ದಾರೆ ಎಂದರು.

ನ.14 ಬೆಳಿಗ್ಗೆ 10.30ಕ್ಕೆ ಗೋಷ್ಠಿ-7 ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ: ಗಾಂಧೀಜಿ ನಿಲುವುಗಳು, ಮಧ್ಯಾಹ್ನ 12.15ಕ್ಕೆ ಗೋಷ್ಠಿ- 8: ನನ್ನ ಕಣ್ಣೋಟದಲ್ಲಿ ಗಾಂಧೀಜಿ ಆಯ್ದ ಶಿಬಿರಾರ್ಥಿಗಳಿಂದ ಗಾಂಧೀಜಿ ಅವರ ಕುರಿತ ಅನಿಸಿಕೆಗಳು ವಿಷಯಗಳ ಮಂಡನೆಯಾಗಿದೆ ಎಂದು ವಿವರಿಸಿದರು.

ಸಮಾರೋಪ ಸಮಾರಂಭ:

ನ.14ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಡ್ಯ ವಿವಿಯ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ ಸಮಾರೋಪ ಭಾಷಣ ಮಾಡುವರು. ವಿದ್ವಾಂಸರಾದ ಡಾ.ರಾಗೌ ಅಧ್ಯಕ್ಷತೆ ವಹಿಸುವರು. ಜಿ.ಪಂ ಸಿಇಒ ಕೆ.ಆರ್.ನಂದಿನಿ ಪ್ರಮಾಣ ಪತ್ರ ವಿತರಿಸುವರು. ಮುಖ್ಯ ಅತಿಥಿಗಳಾಗಿ ಬಿ.ಎಂ. ನಂಜೇಗೌಡ, ಎಂ.ಬಿ. ಬೋರೇಗೌಡ, ಜೆ.ರಾಜಶೇಖರಯ್ಯ ಭಾಗವಹಿಸಿವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಕರ್ನಾಟಕ ಸಂಘದ ನಿರ್ದೇಶಕ ಹನಕೆರೆ ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.