ನಾಗಮಂಗಲ: ನೂತನವಾಗಿ ಮೇಲ್ದರ್ಜೆಗೇರಿಸಲಾದ ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ. ಎಲ್ಲೆಂದರಲ್ಲಿ ಕಸ ರಾಶಿ ಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಬೆಳ್ಳೂರು ಪಟ್ಟಣದ ಪಂಚಾಯಿತಿಯ ವ್ಯಾಪ್ತಿಗೆ ಬೆಳ್ಳೂರು ಕ್ರಾಸ್, ಬೊಮ್ಮನಹಳ್ಳಿ, ಹೊಸೂರು ಕಾಲೊನಿ, ವಡ್ಡರಹಳ್ಳಿ, ಲಕ್ಷ್ಮೀಪುರ, ತಾವರೆಕೆರೆ, ಜವರನಹಳ್ಳಿ ಗ್ರಾಮಗಳು ಸೇರಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ.

ಬೆಳ್ಳೂರು ಪ.ಪಂ ವ್ಯಾಪ್ತಿಯಲ್ಲಿ ಹಲವು ವ್ಯಾಪಾರ ವಹಿವಾಟು ಮಳಿಗೆಗಳಿದ್ದು, ಹೆಚ್ಚಿನ ಪ್ರಮಾಣದಲ್ಲಿ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಸಂತೆ ಮೈದಾನ, ಜೈನರ ಬೀದಿ, ಪೊಲೀಸ್ ಠಾಣೆ ರಸ್ತೆ, ಮಸೀದಿ ರಸ್ತೆ ಮತ್ತು ಮಾರುತಿಪುರಕ್ಕೆ ಸಂಪರ್ಕಿಸುವ ರಸ್ತೆಗಳ ಬದಿ ಕಸದ ರಾಶಿಯು ಹೆಚ್ಚಾಗಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ರೋಗ ಭೀತಿ ಹೆಚ್ಚಾಗಿದೆ.

ಸುತ್ತಮುತ್ತಲಿನ ಗ್ರಾಮ ಗಳಿಗೆ ಬೆಳ್ಳೂರು ಕೇಂದ್ರ ಸ್ಥಾನವಾಗಿ ರುವುದರಿಂದ ಸಂತೆ, ಮಾರುಕಟ್ಟೆಗಳೂ ನಡೆಯುತ್ತವೆ. ಮಾಂಸ, ಮೀನು ಮತ್ತು ಕೋಳಿ ಅಂಗಡಿಗಳ ತ್ಯಾಜ್ಯವನ್ನೂ ರಸ್ತೆ ಬದಿ ಸುರಿಯಲಾಗುತ್ತಿದೆ. ಮದ್ಯದ ಖಾಲಿ ಬಾಟಲಿಗಳು, ಪ್ಯಾಕೆಟ್ಗಳೂ ಚರಂಡಿ ಸೇರುತ್ತಿವೆ. ಅಲ್ಲದೆ, ಮನೆಗಳ ತ್ಯಾಜ್ಯವನ್ನೂ ರಸ್ತೆ ಬದಿ ಸುರಿಯುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಬೆಳ್ಳೂರು ಕ್ರಾಸ್ನಲ್ಲೇ ಹೆಚ್ಚು ಸಮಸ್ಯೆ: ಬೆಂಗಳೂರು– ಮಂಗಳೂರು ಹೆದ್ದಾರಿಗೆ ಹೊಂದಿಕೊಂಡಿ ರುವುದ ರಿಂದ ಬೆಳ್ಳೂರು ಕ್ರಾಸ್ನಲ್ಲಿ ವ್ಯಾಪಾರ ವಹಿವಾಟು ಹೆಚ್ಚು. ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್ ಕವರ್, ಕೋಳಿ ಅಂಗಡಿ ತ್ಯಾಜ್ಯ, ಬಟ್ಟೆ, ಅಂಗಡಿಗಳ ಅನುಪಯುಕ್ತ ವಸ್ತುಗಳನ್ನು ಸುರಿಯಲಾಗುತ್ತಿದೆ. ರಸ್ತೆ ಬದಿಯಲ್ಲೇ ತ್ಯಾಜ್ಯ ಸುರಿಯಲಾಗುತ್ತಿದೆ.

ತ್ಯಾಜ್ಯ ಸಂಗ್ರಹಣಾ ಘಟಕವೇ ಇಲ್ಲ: ತ್ಯಾಜ್ಯ ವಿಲೇವಾರಿಗೆ ಇದ್ದ ಒಂದು ಟ್ರಾಕ್ಟರ್ ಕೆಟ್ಟು ನಿಂತಿದೆ. ಪೌರಕಾರ್ಮಿಕರ ಸಂಖ್ಯೆಯೂ ಅಗತ್ಯ ಕ್ಕಿಂತ ಕಡಿಮೆ ಇದೆ. ಅಲ್ಲದೆ, ತ್ಯಾಜ್ಯ ವಿಲೇವಾರಿಗೆ ಸಂಗ್ರ ಹಣಾ ಘಟಕವೂ ಇಲ್ಲ. ಜಿಲ್ಲಾಧಿಕಾರಿ ಮುಂದಿನ ದಿನಗಳಲ್ಲಿ ಪ.ಪಂ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ಸಮೀಪ ಆರು ಎಕರೆ ಜಾಗವನ್ನು ಮಂಜೂರು ಮಾಡುತ್ತಿದ್ದು, ಶೀಘ್ರವಾಗಿ ಸಮಸ್ಯೆ ಬಗೆಹರಿಸು
ತ್ತೇವೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿ ಸಲಾಗುತ್ತಿದೆ ಎಂದು ಪ.ಪಂ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.

ಬೆಳ್ಳೂರು ಪ.ಪಂ.ನ ಬಹುತೇಕ ಕಡೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಹೆಚ್ಚಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು
ಎಂದು ಸ್ಥಳೀಯರಾದ ಕುಮಾರ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.