ಮಂಡ್ಯ: ಹಿರಿಯ ಮುತ್ಸದ್ಧಿ ಎಚ್.ಡಿ.ಚೌಡಯ್ಯ ಅವರ ನಿಧನ ಅತೀವ ದುಃಖದ ಸಂಗತಿ.94 ವರ್ಷದ ಹಿರಿಯರಾಗಿದ್ದ ಮಾಜಿ ಶಾಸಕರು ಹಾಗೂ ಜನಮುಖಿ ಮುತ್ಸದ್ಧಿ ರಾಜಕಾರಣಿ ಆಗಿದ್ದ ಇವರಿಗೆ ವಯೋ ಸಹಜ ಆರೋಗ್ಯ ಸಮಸ್ಯೆಗಳಿದ್ದವು. ಪತ್ನಿಯವರ ಅಗಲಿಕೆ ಬಳಿಕ ಬಹಳ ನೊಂದಿದ್ದರು. ಈ ನೋವು ಇವರ ಆರೋಗ್ಯವನ್ನು ಹದಗೆಡಿಸಿತ್ತು. ಶತಾಯುಷಿ ಆಗುತ್ತಾರೆ ಎನ್ನುವ ನನ್ನ ನಿರೀಕ್ಷೆಯನ್ನು ನಿರಾಸೆಗೊಳಿಸಿ ನಮ್ಮನ್ನು ಅಗಲಿದ್ದಾರೆ.

ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ ವರ್ಗ ಮತ್ತು ಬಂಧುಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದರು.

ಪಿಇಎಸ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾಗಿ, ಹಿರಿಯ ಸಹಕಾರಿ ಧುರೀಣರಾಗಿ, ಕಾವೇರಿ ಹೋರಾಟದ ಮುಂಚೂಣಿ ನಾಯಕರಾಗಿದ್ದವರು ಚೌಡಯ್ಯ ಅವರು.4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ, ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ ಮಂಡ್ಯದ ಪ್ರತಿಷ್ಠಿತ ಪಿಇಟಿ ಅಧ್ಯಕ್ಷರಾಗಿ 31 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದರು.

ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಇನ್ನಿಲ್ಲ

ಚೌಡಯ್ಯನವರು ಮಂಡ್ಯದ ಸ್ವಾಭಿಮಾನಿ ರಾಜಕಾರಣದ ಪ್ರತೀಕವಾಗಿದ್ದರು. ಇವರ ಅಗಲಿಕೆಯಿಂದ ನನ್ನ ಸಹೃದಯಿ ಹಿತೈಷಿಯೊಬ್ಬರನ್ನು ಕಳೆದುಕೊಂಡಿದ್ದೀನಿ ಎಂದು ಸಿದ್ದರಾಮಯ್ಯ ಕಂಬನಿ ಮಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.