ಮಂಡ್ಯ: ಮಳವಳ್ಳಿ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ 414 ಪ್ರಕರಣಗಳಿಗೆ ಸಂಬಂಧಿಸಿದಂತೆ 583 ಎಕರೆ ಜಮೀನಿನ ಪಹಣಿಯಲ್ಲಿ ಅನಧಿಕೃತವಾಗಿ 776 ನಕಲಿ ಹೆಸರುಗಳನ್ನು ಸೇರಿಸಲಾಗಿದೆ ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ.

ಮಳವಳ್ಳಿ ತಾಲ್ಲೂಕು ವ್ಯಾಪ್ತಿಯ ವಿವಿಧ ಗೋಮಾಳ, ಹುಲ್ಲುಬನ್ನಿ, ಗುಂಡುತೋಪು ಹಾಗೂ ಹಲವಾರು ಜಮೀನು ಸೇರಿದಂತೆ ಒಟ್ಟು 681 ಎಕರೆ 11 ಗುಂಟೆಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮತ್ತು ಪಹಣಿ ಸೃಷ್ಟಿಸಿ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿಯವರು ಸದನದಲ್ಲಿ ಧ್ವನಿ ಎತ್ತಿದ್ದರು.

ತನಿಖಾ ತಂಡ ರಚನೆ:

ಸರ್ಕಾರವು ಪ್ರಕರಣದ ಸಮಗ್ರ ತನಿಖೆಗಾಗಿ 2024ರ ಜುಲೈ 26ರಂದು ಕಂದಾಯ ಆಯುಕ್ತಾಲಯದ ವಿಶೇಷ ಜಿಲ್ಲಾಧಿಕಾರಿ ಸಂಗಪ್ಪ ನೇತೃತ್ವದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ತಂಡವನ್ನು ರಚಿಸಿತ್ತು.

ತನಿಖಾ ತಂಡವು ಸರ್ಕಾರಕ್ಕೆ ಈಚೆಗೆ ವರದಿ ಸಲ್ಲಿಸಿದ್ದು, ವರದಿ ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕಂದಾಯ ಇಲಾಖೆಗೆ ನಿರ್ದೇಶನ ನೀಡಿದೆ.

ಅನಧಿಕೃತ ನಮೂದು ತೆರವುಗೊಳಿಸಿ:

ಈ ಎಲ್ಲ ಪ್ರಕರಣಗಳಲ್ಲಿ ಈಗಾಗಲೇ ಮ್ಯುಟೇಷನ್ (ಎಂ.ಆರ್) ಅನುಮೋದನೆ ಆಗಿರುವುದರಿಂದ ಅವುಗಳನ್ನು ಕರ್ನಾಟಕ ಭೂಕಂದಾಯ ಕಾಯ್ದೆ 1964 ಕಲಂ 136(2) ಅಡಿಯಲ್ಲಿ ಮೇಲ್ಮನವಿ ದಾಖಲಿಸಿಕೊಂಡು ಸೂಕ್ತ ಪರಿಶೀಲನೆ ನಡೆಸಿದ ನಂತರ ಅನಧಿಕೃತ ನಮೂದುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

ತಹಶೀಲ್ದಾರ್ ಮತ್ತು ಫಲಾನುಭವಿಗಳನ್ನು ಕಕ್ಷಿದಾರರನ್ನಾಗಿ ಗುರುತಿಸಬೇಕು. ಲಾಗಿನ್ ನೀಡಿರುವ ಅಧಿಕಾರಿಗಳನ್ನು ಸಹಕಕ್ಷಿದಾರರೆಂದು ಗುರುತಿಸಿ ಅವರಿಗೂ ವಾದ ಮಂಡಿಸಲು ಅವಕಾಶ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಹುಡುಕಿ ಹಾಜರುಪಡಿಸಲು ಅವಕಾಶ ಕಲ್ಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಹೆಚ್ಚುವರಿ ಲಾಗಿನ್ ನೀಡಬೇಡಿ:

ಭೂಮಿ ಕೇಂದ್ರದಲ್ಲಿ ಯಾವುದೇ ಹಂತದ ಕೆಲಸವನ್ನು ಒಂದೇ ಸಿಬ್ಬಂದಿಗೆ ನಿರಂತರವಾಗಿ 3 ವರ್ಷಗಳಿಗಿಂತ ಹೆಚ್ಚು ನೀಡಬಾರದು. ಈ ಪ್ರಕರಣದಲ್ಲಿ ಭೂಮಿ ಶಿರಸ್ತೇದಾರರಿಗೆ ಕಚೇರಿಯ ಕಂದಾಯ ನಿರೀಕ್ಷಕರ ಲಾಗಿನ್ ಸಹ ನೀಡಲಾಗಿತ್ತು. ಹೀಗಾಗಿ ಯಾವುದೇ ನೌಕರನಿಗೆ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಲಾಗಿನ್ ನೀಡಬಾರದು ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ಪ್ರಸ್ತು ಡಿಇಒ ಲಾಗಿನ್ಗೆ ಬಯೋಮೆಟ್ರಿಕ್ ಅನುಮೋದನೆ ಇರುವುದಿಲ್ಲ. ಪಾಸ್ವರ್ಡ್ ಬಳಸಿ ಲಾಗಿನ್ ಮಾಡಲು ಅವಕಾಶ ನೀಡಲಾಗಿದೆ. ಈ ಲಾಗಿನ್ಗಳು ದುರುಪಯೋಗ ಆಗುವ ಸಾಧ್ಯತೆ ಇರುವುದರಿಂದ ಬಯೋಮೆಟ್ರಿಕ್ ಲಾಗಿನ್ ವ್ಯವಸ್ಥೆ ನೀಡಬೇಕು ಎಂದು ಸೂಚಿಸಲಾಗಿದೆ.

‘ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ’

ಯಾವುದೇ ದಾಖಲೆಗಳಿಲ್ಲದೇ ಹೆಸರುಗಳನ್ನು ದಾಖಲಿಸುವುದು ಸರ್ಕಾರಿ ನೌಕರರಿಗೆ ತರವಲ್ಲದ ವರ್ತನೆಯಾಗಿದೆ. ಭಾರತೀಯ ನ್ಯಾಯ ಸಂಹಿತೆ ಮತ್ತು ಕರ್ನಾಟಕ ಭೂಕಂದಾಯ ಕಾಯ್ದೆ 1964 ಕಲಂ 192ಎ ಪ್ರಕಾರ ಇದು ಅಪರಾಧವಾಗಿದೆ. ಆದುದರಿಂದ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಸರ್ಕಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ತನಿಖಾ ತಂಡ ಶಿಫಾರಸು ಮಾಡಿದೆ. ಮಳವಳ್ಳಿಯ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಎಂ.ವಿಜಯಣ್ಣ ಗ್ರೇಡ್–2 ತಹಶೀಲ್ದಾರ್ ಕುಮಾರ ಬಿ.ವಿ. ಶಿರಸ್ತೇದಾರ್ ಅಶೋಕಕುಮಾರ ಎಚ್.ಎಂ. ಪ್ರಥಮ ದರ್ಜೆ ಸಹಾಯಕ ಪ್ರಕಾಶ ಜಿ.ಎಂ ಗ್ರಾಮ ಆಡಳಿತ ಅಧಿಕಾರಿಗಳಾದ ಕಲಾವತಿ ರಂಜಿತಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕಂದಾಯ ನಿರೀಕ್ಷಕ ಚಂದ್ರ ಮತ್ತು ಶಿರಸ್ತೇದಾರ್ ಬಸವಲಿಂಗೇಗೌಡ ಈ ಇಬ್ಬರೂ ಪ್ರಸ್ತುತ ನಿವೃತ್ತರಾಗಿದ್ದಾರೆ’ ಎಂದು ತನಿಖಾ ತಂಡದಲ್ಲಿ ವರದಿಯಾಗಿದೆ.

‘ಇಬ್ಬರು ಅಮಾನತು; 286 ಎಕರೆ ವಶಕ್ಕೆ’

‘ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಿರುವ ಪ್ರಕರಣದಲ್ಲಿ ಶಿರಸ್ತೇದಾರ್ ಅಶೋಕ್ಕುಮಾರ್ ಮತ್ತು ಎಫ್ಡಿಎ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದ್ದು ಎಫ್ಐಆರ್ ಕೂಡ ದಾಖಲಾಗಿದೆ. ನಾಲ್ವರು ಸರ್ಕಾರಿ ನೌಕರರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ. ‘ಅಕ್ರಮವಾಗಿ ಖಾತೆಯಾಗಿದ್ದ 286 ಎಕರೆಯನ್ನು ವಶಕ್ಕೆ ಪಡೆದಿದ್ದು ಬಾಕಿ 395 ಎಕರೆಗೆ ಸಂಬಂಧಿಸಿದಂತೆ ‘ಎ.ಸಿ ಕೋರ್ಟ್’ನಲ್ಲಿ ವಿಚಾರಣೆ ನಡೆಯುತ್ತಿದೆ. ತನಿಖಾ ತಂಡದ ವರದಿ ಆಧಾರದ ಮೇಲೆ ಇಲಾಖೆ ವಿಚಾರಣೆ ಆರಂಭವಾಗಿದೆ. ಇದರಲ್ಲಿ ತಪ್ಪು ಸಾಬೀತಾದರೆ ಶಿಕ್ಷೆ ಜಾರಿಯಾಗುತ್ತದೆ’ ಎಂದು ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗೆ ಒತ್ತಾಯಿಸುತ್ತೇನೆ: ಶಾಸಕ

ತನಿಖಾ ತಂಡ ವರದಿಯನ್ನು ಸ್ವಾಗತಿಸುತ್ತೇನೆ. ಆದರೆ 681 ಎಕರೆಗೂ ಹೆಚ್ಚಿನ ಸರ್ಕಾರಿ ಜಮೀನು ಅಕ್ರಮ ಪರಭಾರೆಯಾಗಿದೆ ಎಂಬುದು ನನ್ನ ಭಾವನೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವು ಸರ್ಕಾರಿ ನೌಕರರು ತನಿಖೆ ನಡೆಯುವ ವೇಳೆಯೂ ತಾಲ್ಲೂಕಿನಲ್ಲೇ ಕರ್ತವ್ಯದಲ್ಲಿದ್ದರು. ತಾಲ್ಲೂಕಿನಲ್ಲಿ ‘ಲ್ಯಾಂಡ್ ಮಾಫಿಯಾ’ ಜೋರಾಗಿದೆ. ಈ ಎಲ್ಲ ಅಂಶಗಳನ್ನು ಕಂದಾಯ ಸಚಿವರು ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತರುತ್ತೇನೆ. ಎಲ್ಲ ಆಯಾಮಗಳಲ್ಲೂ ತೀವ್ರತರವಾದ ಹೆಚ್ಚಿನ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.